ಭಾರತದಿಂದಲೇ ಸೇನೆ ವಾಪಸ್ ಎಂದ ಚೀನಾ ಸರ್ಕಾರದ ಮುಖವಾಣಿ!

ಇತ್ತ ಕೇಂದ್ರ ಸರ್ಕಾರದ ರಾಜತಾಂತ್ರಿಕ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ ಎಂದು ವರದಿ ಬಿತ್ತರವಾಗುತ್ತಿದ್ದರೆ ಅತ್ತ ಚೀನಾ ಕೂಡ ಭಾರತವೇ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಇತ್ತ ಕೇಂದ್ರ ಸರ್ಕಾರದ ರಾಜತಾಂತ್ರಿಕ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ ಎಂದು ವರದಿ ಬಿತ್ತರವಾಗುತ್ತಿದ್ದರೆ ಅತ್ತ ಚೀನಾ ಕೂಡ ಭಾರತವೇ ತನ್ನ ಸೇನೆಯನ್ನು ವಾಪಸ್  ಕರೆಸಿಕೊಂಡಿದೆ ಎಂದು ಹೇಳಿಕೊಂಡಿದೆ.

ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ತನ್ನ ವೈಬ್ ಸೈಟಿನಲ್ಲಿ ಈ ಬಗ್ಗೆ ವರದಿ ಬಿತ್ತರಿಸಿದ್ದು, ವರದಿಯಲ್ಲಿ ಭಾರತ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದೆ. ಅಲ್ಲದೆ ಈ ಬಗ್ಗೆ  ಭಾರತ ದೇಶದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಗ್ಲೋಬಲ್ ಟೈಮ್ಸ್ ವರದಿ ಮಾಡಿರುವಂತೆ ಚೀನಾದ ವಿದೇಶಾಂಗ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರತ ಸರ್ಕಾರ ತನ್ನ  ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ವರದಿ ಮಾಡಿದೆ.

ಸುಧೀರ್ಘ 2 ತಿಂಗಳಿಗೂ ಅಧಿಕ ಕಾಲ ನಡೆದ ಭಾರತ-ಚೀನೀ ಸೈನಿಕರ ಸಂಘರ್ಷಕ್ಕೆ ಉಭಯ ದೇಶಗಳ ಸರ್ಕಾರಗಳು ತಾರ್ಕಿಕ ಅಂತ್ಯ ನೀಡಿವೆ. ಈ ಹಿಂದೆ ಲಡಾಖ್ ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಹಲ್ಲೆ  ಮಾಡಿದ್ದಲ್ಲದೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವು ಸೈನಿಕರು ಗಾಯಗೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ವಿಶ್ವ ಸಮುದಾಯ ಸಮಸ್ಯೆ ಸಂಧಾನದ ಮೂಲಕ ಸಮಸ್ಯೆ  ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com