ಕಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ: ಸಿಪಿಎಂ ಕಟ್ಟಾಳು ಪಿ.ಜಯರಾಜನ್ ಆರೋಪಿ ಎಂದ ಸಿಬಿಐ
ಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತ ಕಥಿರೂರ್ ಮನೋಜ್ ಅವರನ್ನು 2014 ರಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಿಪಿಎಂ ಕಟ್ಟಾಳು, ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಪಿ.ಜಯರಾಜನ್ ಅವರನ್ನು ಸಿಬಿಐ ಆರೋಪಿ ಎಂದು ಗುರುತಿಸಿದೆ.
ಕೊಚ್ಚಿ: ಕಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತ ಕಥಿರೂರ್ ಮನೋಜ್ ಅವರನ್ನು 2014 ರಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಿಪಿಎಂ ಕಟ್ಟಾಳು, ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಪಿ.ಜಯರಾಜನ್ ಅವರನ್ನು ಸಿಬಿಐ ಆರೋಪಿ ಎಂದು ಗುರುತಿಸಿದೆ.
ತನಿಖಾಧಿಕಾರಿ ಹರಿ ಓಂಪ್ರಕಾಶ್ ಕೊಚ್ಚಿಯಲ್ಲಿರುವ ಸಿಬಿಐ ನ್ಯಾಯಾಲಯ 3ರಲ್ಲಿ ಇದಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಜಯರಾಜನ್ ಅವರನ್ನು 25 ನೇ ಆರೋಪಿ ಎಂದು ಪಟ್ಟಿ ಮಾಡಲಾಗಿದೆ.
ಇದೇ ಪ್ರಕರಣದಲ್ಲಿ ಉಳಿದ ಐದು ಆರೋಪಿಗಳೆಂದು ಹೇಳಲಾದವರ ಹೆಸರುಗಳು ಹೀಗಿದೆ- ರಾಜೇಶ್, ಸುನೀಲ್ ಕುಮಾರ್, ಮಹೇಶ್, ಸಜೀಲೇಶ್ ಮತ್ತು ರಾಕೇಶ್, ಈ ಎಲ್ಲರೂ ಅಪರಾಧದ ಪಿತೂರಿ ಮತ್ತು ಇತರೆ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಇದಕ್ಕೂ ಮುನ್ನ ಇನ್ನೊಂದು ಆರೋಪಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಿತ್ತು, ಅದರಲ್ಲಿ , 19 ಜನರನ್ನು ಆರೋಪಿ ಎನ್ನುವುದಾಗಿಯೂ ಮತ್ತು 200 ಜನರನ್ನು ಸಾಕ್ಷಿಗಳಾಗಿ ಪಟ್ಟಿ ಮಾಡಿತ್ತು.
2014 ರ ಸೆಪ್ಟಂಬರ್ 1 ರಂದು ಸಿಪಿಎಂ ಕಾರ್ಮಿಕರ ಸಂಘಟನೆಯಿಂದ ಕತಿರೂರ್ ಮನೋಜ್ ನನ್ನು ಕೊಲ್ಲ್ಲಾಗಿತ್ತು. ಸಿಪಿಎಂ ಪಕ್ಷದ ಕಾರ್ಯಕರ್ತರು ಕಣ್ಣೂರಿನಲ್ಲಿ ಬಿಜೆಪಿ ಪರವಾಗಿ ನ್ಕೆಲಸ ಮಾಡುತ್ತಿದ್ದ ಮನೋಜ್ ಮನೋಜ್ ವಿರುದ್ಧ ಸಂಚು ರೂಪಿಸಿ ಕೊಂದಿದ್ದಾರೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ದಾಖಲಿಸಿದೆ.
ಈ ಪ್ರಕರಣವನ್ನು ಪ್ರಾರಂಬದಲ್ಲಿ ಕೇರಳ ಪೋಲಿಸರು ತನಿಖೆ ನಡೆಸಿದ್ದರು. ನಂತರದಲ್ಲಿ ಇದನ್ನು ಸಿಬಿಐಗೆ ವಹಿಸಲಾಗಿತ್ತು.