ನೋಟು ನಿಷೇಧದ ಅಂಕಿ-ಅಂಶ: ಆರ್ ಬಿಐ ವಿರುದ್ಧ ಪಿ ಚಿದಂಬರಂ ವಾಗ್ದಾಳಿ

ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಆರ್ ಬಿಐ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಿ.ಚಿದಂಬರಂ
ಪಿ.ಚಿದಂಬರಂ
Updated on: 
ನವದೆಹಲಿ: ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಆರ್ ಬಿಐ ನ್ನು ತರಾಟೆಗೆ ತೆಗೆದುಕೊಂಡಿದ್ದು, ಶೇ.1 ರಷ್ಟು ನಿಷೇಧಿತ ನೋಟುಗಳು ವಾಪಸ್ ಬರದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನೂ ಟೀಕಿಸಿರುವ ಚಿದಂಬರಂ, ಕಪ್ಪುಹಣವನ್ನು ಸಕ್ರಮ ಮಾಡುವುದೇ ಮೋದಿ ನೇತೃತ್ವದ ಸರ್ಕಾರದ ನೋಟು ನಿಷೇಧದ ಉದ್ದೇಶವಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ. ನೋಟು ನಿಷೇಧದ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, 104 ಜನರನ್ನು ಬಲಿ ತೆಗೆದುಕೊಂಡಿದೆ. ಪ್ರಧಾನಿ ಇದಕ್ಕೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 
ಶೇ.99 ರಷ್ಟು ಹಣವನ್ನು ಕಾನೂನುಬದ್ಧವಾಗಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕಪ್ಪುಹಣವನ್ನು ಸಕ್ರಮ ಮಾಡುವುದೇ ಮೋದಿ ನೇತೃತ್ವದ ಸರ್ಕಾರದ ನೋಟು ನಿಷೇಧದ ಉದ್ದೇಶವಾಗಿತ್ತಾ? ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.  ನೋಟು ನಿಷೇಧದ ಹಿಂದಿರುವ ಆರ್ಥಿಕ ತಜ್ಞರು ನೋಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ, ಆರ್ ಬಿಐ ನೋಟು ನಿಷೇಧದಿಂದ 16,000 ಗಳಿಸಿದ್ದರೆ, ಹೊಸ ನೋಟುಗಳನ್ನು ಮುದ್ರಿಸಲು 21,000 ಕೋಟಿ ನಷ್ಟ ಎದುರಿಸಿದೆ ಎಂದು ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com