ಮೋದಿ 'ನೀಚ ಆದ್ಮಿ' ಹೇಳಿಕೆ: ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಮಣಿ ಶಂಕರ್ ಅಯ್ಯರ್ ಉಚ್ಛಾಟನೆ

ಪ್ರಧಾನಿ ಮೋದಿಯವರನ್ನು ನೀಚ ಆದ್ಮಿ ಎಂದು ಕರೆದು ಸಮಸ್ಯೆ ಸೃಷ್ಟಿಸಿಕೊಂಡಿರುವ ಕಾಂಗ್ರೆಸ್ ...
ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್
Updated on: 
ನವದೆಹಲಿ: ಪ್ರಧಾನಿ ಮೋದಿಯವರನ್ನು ನೀಚ ಕಿಸಮ್ ಕಾ ಆದ್ಮಿ ಎಂದು ಕರೆದು ಸಮಸ್ಯೆ ಸೃಷ್ಟಿಸಿಕೊಂಡಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರನ್ನು ನಿನ್ನೆ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್ ಅವರನ್ನು ವಜಾಗೊಳಿಸಿದೆ. 
ಹೇಳಿಕೆ ನೀಡಿದ್ದಕ್ಕೆ ಮಣಿಶಂಕರ್ ಅಯ್ಯರ್ ಅವರಿಗೆ ಶೋಕಾಸ್ ನೊಟೀಸ್ ಕೂಡ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷದ ಈ ತೀರ್ಮಾನ, ವಿರೋಧ ಪಕ್ಷದವರನ್ನು ಕಾಂಗ್ರೆಸ್ ಗೌರವಿಸುತ್ತದೆ ಎಂಬ ನಂಬಿಕೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನ ವರ್ಕಾರ ರಂದೀಪ್ ಸುರ್ಜೆವಾಲ ತಿಳಿಸಿದ್ದಾರೆ.
2014ರ ಲೋಕಸಭೆ ಚುನಾವಣೆಗೆ ಮುನ್ನ ಕೂಡ ನರೇಂದ್ರ ಮೋದಿಯವರನ್ನು ಮಣಿಶಂಕರ್ ಅಯ್ಯರ್ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದು ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್, ಒಬ್ಬ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ.ಅವರು ಇಲ್ಲಿ ಚಹಾ ಮಾರಲು ಬಯಸುವುದಾದರೆ ಅವರಿಗೊಂದು ಜಾಗ ಹುಡುಕಿಕೊಡೋಣ ಎಂದು ಅಪಹಾಸ್ಯ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com