ಬಳಿಕ ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡ ಬಾಲಿಕ ಅದೇ ಸ್ಥಿತಿಯಲ್ಲಿ ಮನೆಗೆ ತೆರಳಿ ಪೋಷಕರಿಗೆ ನಡೆದ ವಿಚಾರ ತಿಳಿಸಿದ್ದು, ಕೂಡಲೇ ಪೋಷಕರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ ವಿರೇಂದ್ರ ಯಾದವ್ ಎಂಬ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವನಿಗಾಗಿ ಶೋಧ ನಡೆಸಿದ್ದಾರೆ. ಅಂತೆಯೇ ಸಹಾಯ ಯಾಚಿಸಿದ ಬಾಲಕಿ ಮೇಲೆ ಮತ್ತೆ ಅತ್ಯಾಚಾರ ನಡೆಸಿದ ಮೂರನೇ ವ್ಯಕ್ತಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಸರೋಜಿನಿ ನಗರದ ವೃತ್ತ ನಿರೀಕ್ಷಕ ಲಲ್ಟಾ ಪ್ರಸಾದ್ ಸಿಂಗ್ ಮಾಹಿತಿ ನೀಡಿದ್ದಾರೆ.