ಅಂತೆಯೇ ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ ಟಿ ವ್ಯಾಪ್ತಿಗೆ ಬಂದರೆ, ಜಿಎಸ್ ಟಿ ಯಡಿಯಲ್ಲಿನ ಗರಿಷ್ಠ ತೆರಿಗೆಯ ಶ್ರೇಣಿಗೆ ಬರುವ ಸಾಧ್ಯತೆ ಇದೆ. ಪ್ರಸ್ತತು ಕೇಂದ್ರ ಸರ್ಕಾರ ಶೇ.40ರಷ್ಟು ಆಧಾಯವನ್ನು ಪೆಟ್ರೋಲಿಯಂ ಉತ್ಪನ್ನದಳ ಮೇಲಿನ ಆದಾಯದಿಂದಲೇ ಪಡೆಯುತ್ತಿದೆ ಎಂದು ಹೇಳಿದರು. ಅಂತೆಯೇ ರಾಜ್ಯಗಳೂ ತಮ್ಮ ಆದಾಯವನ್ನು ರಕ್ಷಿಸಿಕೊಳ್ಳಲು ಮೇಲ್ತೆರಿಗೆ ವಿಧಿಸಲು ಅವಕಾಶ ನೀಡುವ ನಿರೀಕ್ಷೆ ಇದೆ ಎಂದರು. ಇನ್ನು ಸದ್ಯಕ್ಕೆ ಜಿಎಸ್‌ಟಿಯಲ್ಲಿ ಶೇ.5, ಶೇ.12, ಶೇ.18, ಶೇ.28 ಎಂಬ ತೆರಿಗೆ ಶ್ರೇಣಿಯಿದ್ದು, ಜಿಎಸ್‌ಟಿಯಿಂದ ವಿನಾಯಿತಿ ನೀಡಿರುವ ಹಲವಾರು ವಸ್ತುಗಳೂ ಕೂಡ ಇವೆ. ಜಿಎಸ್‌ಟಿ ಯಡಿಯಲ್ಲಿ ಶೇ.28ರ ತೆರಿಗೆಯ ಬದಲಿಗೆ ಶೇ.25 ಗರಿಷ್ಠ ತೆರಿಗೆ ಶ್ರೇಣಿಯಾಗಿ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ಸುಶೀಲ್ ಮೋದಿ ಕೊಟ್ಟಿದ್ದಾರೆ.