ರಾಜ್ ಕೋಟ್ ವೆಸ್ಟ್ ವಿಧಾನಸಭಾ ಕ್ಷೇತ್ರದಿಂದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗೆಲುವು

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಗೆಲುವು ದಾಖಲಿಸಿದ್ದಾರೆ.
ಗುಜರಾತ್ ಸಿಎಂ ವಿಜಯ್ ರೂಪಾನಿ
ಗುಜರಾತ್ ಸಿಎಂ ವಿಜಯ್ ರೂಪಾನಿ
ರಾಜ್ ಕೋಟ್ ವೆಸ್ಟ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಗೆಲುವು ದಾಖಲಿಸಿದ್ದಾರೆ.
ರಾಜ್ ಕೋಟ್ ವೆಸ್ಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಇಂದ್ರನೀಲ್ ರಾಜ್ ಗುರು ವಿರುದ್ಧ ಸ್ಪರ್ಧಿಸಿದ್ದ ಗುಜರಾತ್ ಸಿಎಂ ರೂಪಾನಿ ಆರಂಭದಲ್ಲಿ ಹಿನ್ನಡೆ ಎದುರಿಸಿದ್ದರು. ಅಂತಿಮವಾಗಿ ಇಂದ್ರನೀಲ್ ರಾಜ್ ಗುರು ವಿರುದ್ಧ ಗೆಲುವು ದಾಖಲಿಸಿದ್ದಾರೆ. 
ರಾಜ್ ಕೋಟ್ ವೆಸ್ಟ್ ವಿಧಾನಸಭಾ ಕ್ಷೇತ್ರ ಗುಜರಾತ್ ಗೆ 3 ಮುಖ್ಯಮಂತ್ರಿಗಳನ್ನು ನೀಡಿದ್ದು, ಕೇಶುಭಾಯ್ ಪಟೇಲ್, ನರೇಂದ್ರ ಮೋದಿ, ವಿಜಯ್ ರೂಪಾನಿ ಅವರು ಇದೇ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮುಖ್ಯಮಂತ್ರಿಗಳಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com