ಯಾರೂ ಕ್ಷಮೆ ಕೇಳುವುದಿಲ್ಲ: ರಾಜ್ಯ ಸಭೆಯಲ್ಲಿ ಪ್ರತಿಭಟನಾ ನಿರತ ಸಂಸದರಿಗೆ ವೆಂಕಯ್ಯ ನಾಯ್ಡು

ಇತ್ತೀಚೆಗೆ ಮುಗಿದ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ತಮ್ಮ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಮಾಡಿದ ಟಿಕೆಗೆ ಕ್ಷಮೆಯಾಚಿಸಬೇಕೆಂಬ ...
ಎಂ. ವೆಂಕಯ್ಯ ನಾಯ್ಡು
ಎಂ. ವೆಂಕಯ್ಯ ನಾಯ್ಡು
Updated on: 
ನವದೆಹಲಿ: ಇತ್ತೀಚೆಗೆ ಮುಗಿದ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ತಮ್ಮ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಮಾಡಿದ ಟಿಕೆಗೆ ಕ್ಷಮೆಯಾಚಿಸಬೇಕೆಂಬ ಕಾಂಗ್ರೆಸ್ ಮುಖಂಡರ ಮನವಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ..
ಇಂದು ನಡೆದ ರಾಜ್ಯ ಸಭೆ ಕಲಾಪದಲ್ಲಿ ಉಪರಾಷ್ಟ್ರಪತಿಗಳು ಕ್ಷಮೆ ಕೋರುವ ಪ್ರಶ್ನೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಕಲಾಪದ ವೇಳೆ ಕೋಲಾಹಲವನ್ನು ಸೃಷ್ಟಿಸಿದ್ದಲ್ಲದೆ ಪ್ರಧಾನಿಗಳು ಸದನಕ್ಕೆ ಆಗಮಿಸಿ, ಸಿಂಗ್ ವಿರುದ್ಧದ ಅವರ ಟೀಕೆಗಳಿಗೆ ಸ್ಪಷ್ಠೀಕರಣ ನೀಡಬೇಕೆಂದು ಆಗ್ರಹಿಸಿದ್ದರು.
ಮೇಲ್ಮನೆ ಕಲಾಪವು ಇಂದು ಎರಡು ಬಾರಿ ಮುಂದೂಡಲ್ಪಟ್ಟಿತ್ತು.  ಮೊದಲು ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಮತ್ತು ಪ್ರಶ್ನೋತ್ತರ ಅವಧಿಯಲ್ಲಿಯೂ ಸದಸ್ಯದ ಗದ್ದಲ ಮುಂದುವರಿದಿತ್ತು. ಆಗ ನಾಯ್ಡು ಅವರು "ಯಾರೂ ಕ್ಷಮೆ ಯಾಚಿಸುವುದಿಲ್ಲ, ರಾಜ್ಯ ಸಭೆ ಅಥವಾ ಸಂಸತ್ತಿನಲ್ಲಿ ಈ ಘಟನೆ ನಡೆದಿಲ್ಲ.  ಸಂಸತ್ತಿನ ಕಲಾಪದ ವೇಳೆ ಯಾವುದೇ ಹೇಳಿಕೆಯನ್ನು ಪ್ರಧಾನಿಗಳು ನೀಡಿಲ್ಲ.  ಪ್ರಶ್ನೋತ್ತರ ಅವಧಿಯನ್ನು ವ್ಯರ್ಥವಾಗಿಸಕೂಡದು. ತಾವೆಲ್ಲರೂ ಸಭಾ ಮರ್ಯಾದೆಯನ್ನು ಕಾಪಾಡಿಕೊಳ್ಳಬೇಕು. ಇದಾಗಲೇ ಕಲಾಪಗಳ ಬಗೆಗೆ ತಪ್ಪು ಸಂದೇಶ ರವಾನೆಯಾಗಿದೆ" ಎಂದರು. ಇದಾದ ನಂತರ ಅವರು ಸದನವನ್ನು ಮದ್ಯಾಹ್ನ ಎರಡರ ವರೆಗೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com