ಗೋವಾದಲ್ಲಿ ಜಾಲಿ ರೈಡ್ ಮೂಡ್ ನಲ್ಲಿ ಸೋನಿಯಾ ಗಾಂಧಿ!

ಇಷ್ಟು ದಿನ ಎಲ್ಲರೂ ಸೋನಿಯಾ ಗಾಂಧಿಯವರನ್ನು ಯಾವುದೋ ಸಭೆ, ಸಮಾರಂಭಗಳಲ್ಲಿ
ಗೋವಾದಲ್ಲಿ ಸೈಕಲ್ ನಲ್ಲಿ ಕುಳಿತು ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ
ಗೋವಾದಲ್ಲಿ ಸೈಕಲ್ ನಲ್ಲಿ ಕುಳಿತು ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ
ನವದೆಹಲಿ: ಇಷ್ಟು ದಿನ ಎಲ್ಲರೂ ಸೋನಿಯಾ ಗಾಂಧಿಯವರನ್ನು ಯಾವುದೋ ಸಭೆ, ಸಮಾರಂಭಗಳಲ್ಲಿ, ರಾಜಕೀಯ ಸಂಬಂಧ ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಆದರೆ ಅಪರೂಪವೆಂಬಂತೆ ಅವರು ಜನರ ಕಣ್ಣಿಗೆ ಈ ಬಾರಿ ಬೇರೆ ಕಡೆ ಕಾಣಸಿಕ್ಕಿದ್ದಾರೆ.
ಇತ್ತೀಚೆಗಷ್ಟೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಪುತ್ರ ರಾಹುಲ್ ಗಾಂಧಿಗೆ ವಹಿಸಿದ ನಂತರ ಕೊಂಚ ನಿರಾಳರಾಗಿರುವ ಸೋನಿಯಾ ಗಾಂಧಿ ರಜಾ ಮೂಡ್ ನಲ್ಲಿ ಗೋವಾಕ್ಕೆ ತೆರಳಿದ್ದಾರೆ.   
ಗೋವಾ ಸುತ್ತಮುತ್ತ  ಸೈಕಲ್ ನಲ್ಲಿ ಜಾಲಿ ರೈಡ್ ಮಾಡುತ್ತಿರುವ ಅವರ ಫೋಟೋವನ್ನು ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಮೊನ್ನೆ 26ರಂದು ದೆಹಲಿಯಿಂದ ಗೋವಾಗೆ ತೆರಳಿರುವ ಸೋನಿಯಾ, ದಕ್ಷಿಣ ಗೋವಾದ ಲೀಲಾ ಹೋಟೆಲ್​ನಲ್ಲಿ ತಂಗಿದ್ದು, ಜನವರಿ ಮೊದಲ ವಾರದಂದು ದೆಹಲಿಗೆ ವಾಪಸಾಗಲಿದ್ದಾರೆ ಎನ್ನಲಾಗುತ್ತಿದೆ.
ಇದುವರೆಗೆ ವಿದೇಶಿ ಪ್ರವಾಸ, ರಜೆ ಎಂದು ರಾಹುಲ್ ಗಾಂಧಿ ಸುದ್ದಿಯಾಗುತ್ತಿದ್ದರು. ಇದೀಗ ಈ ಬಾರಿ ಸ್ವತಃ ಸೋನಿಯಾ ರಜಾ ಮಜಾದಲ್ಲಿದ್ದಾರೆ ಎಂದೆಲ್ಲಾ  ಕಮೆಂಟ್​ಗಳೂ ಬಂದಿವೆ.
ಇದು ಸೋನಿಯಾ ಗಾಂಧಿಯವರಿಗೆ ಮೆಚ್ಚಿನ ತಾಣವಂತೆ. ರಜೆಯ ಖುಷಿಯ ಜೊತೆ ದಕ್ಷಿಣ ಭಾರತದ ಜನಪ್ರಿಯ ಮಸಾಲೆ ದೋಸೆ ಸೇರಿದಂತೆ ಊಟ ತಿಂಡಿ ಸೇವಿಸುತ್ತಾ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com