ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಸೇರಿದಂತೆ ಶ್ರೇಷ್ಠ ವ್ಯಕ್ತಿಗಳು ಮಾನವ ನಿಷ್ಠೆ, ಮಾನವೀಯತೆಗೆ ಹೆಚ್ಚಿನ ಮಹತ್ವವನ್ನು ಸಾರಿದ್ದರು. ಇದೇ ತತ್ವಗಳು ಭಾರತದಾದ್ಯಂತ ಪಸರಿಸಿದವು. ನಂತರದಲ್ಲಿ ದಾಸ ಪಂಥದಲ್ಲಿ ಬಂದಂತಹ ತುಳಸಿದಾಸ, ಚೈತನ್ಯದೇವರು, ಗುರುನಾನಕ್, ರಮಾನಂದ, ಕಬೀರ್ ದಾಸ್, ಸೂರ್ ದಾಸ್ ರಂಥವರು ಸಹ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.