ತಮಿಳುನಾಡು: ರೆಸಾರ್ಟ್ ನಲ್ಲಿ ಶಾಸಕರನ್ನು ಭೇಟಿ ಮಾಡಿ ಶಶಿಕಲಾ ಸಭೆ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಶನಿವಾರ ಪಕ್ಷದ ಶಾಸಕರನ್ನು...
ವಿ.ಕೆ.ಶಶಿಕಲಾ
ವಿ.ಕೆ.ಶಶಿಕಲಾ
Updated on: 
ಕವತ್ತೂರು(ತಮಿಳುನಾಡು): ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಶನಿವಾರ ಪಕ್ಷದ ಶಾಸಕರನ್ನು ಕುವತೂರಿನ ಗೋಲ್ಡನ್ ಬೆ ರೆಸಾರ್ಟ್ ನಲ್ಲಿ ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಸರ್ಕಾರ ರಚಿಸಲು ಬಹುಮತ ಸಾಬೀತುಪಡಿಸಬೇಕಾಗಿರುವುದರಿಂದ ಕುದುರೆ ವ್ಯಾಪಾರ ನಡೆಯದಂತೆ ತಡೆಯಲು ಶಶಿಕಲಾ ಪಕ್ಷದ ಶಾಸಕರನ್ನು ಅಲ್ಲಿ ಕೂಡಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದಲ್ಲಿ ತಮಗಿರುವ ಬೆಂಬಲವನ್ನು ಸಾಬೀತುಪಡಿಸಲು ನಂತರ ಶಶಿಕಲಾ ಅವರು ಶಾಸಕರನ್ನು ಕರೆದುಕೊಂಡು ರಾಜಭವನಕ್ಕೆ ತೆರಳುವ ಸಾಧ್ಯತೆಯಿದೆ.
ಈ ಮಧ್ಯೆ, ರೆಸಾರ್ಟ್ ನ ಸುತ್ತಮುತ್ತ ತೀವ್ರ ಭದ್ರತೆ ಏರ್ಪಡಿಸಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೂಡ ತೊಂದರೆಯುಂಟಾಗಿದೆ.
ಮೂಲಗಳ ಪ್ರಕಾರ, ಗ್ರಾಮಗಳಿಗೆ ತೆರಳುವ ರಸ್ತೆಗಳನ್ನು ಮುಚ್ಚಲಾಗಿದ್ದು ರಾತ್ರಿ ಹೊತ್ತಿನಲ್ಲಿ ಬೀದಿ ದೀಪಗಳನ್ನು ಆರಿಸಲಾಗುತ್ತದೆ. ಶಾಸಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಶಾಸಕರನ್ನು ಭೇಟಿ ಮಾಡಿದ ನಂತರ ಸಭೆಯಲ್ಲಿ ಏನೇನು ಚರ್ಚೆಗಳಾದವು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com