ಚಂಡಿಗಢದಲ್ಲಿ ಭೀಕರ ರಸ್ತೆ ಅಪಘಾತ, 8 ಮಂದಿ ಸಾವು

ಚಂಡಿಗಢದ ಅಂಬಾಲಾ ಸಮೀಪ ನಾರಾಯಣಗಢ-ಸಧೌರಾ ರಸ್ತೆಯಲ್ಲಿ ಬುಧವಾರ ಎಸ್‌ಯವಿ ಕಾರ್ ವೊಂದು ಎದುರುಗಡೆಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಅಂಬಾಲಾ: ಚಂಡಿಗಢದ ಅಂಬಾಲಾ ಸಮೀಪ ನಾರಾಯಣಗಢ-ಸಧೌರಾ ರಸ್ತೆಯಲ್ಲಿ ಬುಧವಾರ ಎಸ್‌ಯವಿ ಕಾರ್ ವೊಂದು ಎದುರುಗಡೆಯಿಂದ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಸ್‌ಯುವಿ ವಾಹನದಲ್ಲಿದ್ದವರು ಉತ್ತರ ಪ್ರದೇಶದ ಮಿರ್ಜಾಪುರ ಮಹಾಲಾದಲ್ಲಿ ಮದುವೆ ಸಮಾರಂಭಕ್ಕೆಂದು ನಾರಾಯಣಗಢ ಸಮೀಪದ ಮೋಲಿ ಎಂಬ ಗ್ರಾಮದಿಂದ ಹೋಗುತ್ತಿದ್ದರು. ದಹಾರ್‌ ಅಂಬ್ಲಿ ಗ್ರಾಮದ ಸಮೀಪ ಇವರ ವಾಹನ ಎದುರುಗಡೆಯಿಂದ ಧಾವಿಸಿ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮನು(50), ಲೀಲಾ(40), ಹುಕಂ(35), ಕಮಾ(37), ಆಂಗ್ರೆಜ್‌(40), ಸೋನು(25), ಧೂಮ್‌ ಸಿಂಗ್‌(62) ಮತ್ತು ಟಿಂಕು(45) ಎಂದು ಗುರುತಿಸಲಾಗಿದೆ. 
ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಚಂಡಿಗಢದಲ್ಲಿನ ಪಿಜಿಐಎಂಇಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com