ಪೊಲೀಸರಿಗೆ ಕಾಯುವ ಬದಲು ನೀವೇ ಮುನ್ನೆಚ್ಚರಿಕೆ ತೆಗೆದುಕೊಳ್ಳಿ: ಮತ್ತೆ ವಿವಾದದಲ್ಲಿ ಅಬು ಅಜ್ಮಿ

ಬೆಂಗಳೂರಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹೇಳಿಕೆ ನೀಡಿ ಮಹಿಳೆಯ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು...
ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ
ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ
Updated on

ಮುಂಬೈ: ಬೆಂಗಳೂರಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹೇಳಿಕೆ ನೀಡಿ ಮಹಿಳೆಯ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮಹಿಳೆಯರೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದ್ದು, ಪೊಲೀಸರಿಗಾಗಿ ಕಾಯಬಾರದು ಎಂದು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ನನ್ನ ಬಳಿಯಿರುವ ದುಡ್ಡು ಕಳ್ಳತನವಾದರೆ, ಮತ್ತೆ ಆ ಜಾಗದಲ್ಲಿ ನಾನು ಹಣವನ್ನು ಇಡುವುದಿಲ್ಲ. ಪೊಲೀಸರಿ ಮೇಲೆ ಜವಾಬ್ದಾರಿ ಹೊರಿಸುವುದಿಲ್ಲ. ಹಾಗೆಯೇ, ನಮ್ಮ ಮಕ್ಕಳು ತಮ್ಮ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯವೆಸಗುವ ಜನರಿಗೆ ಅವಕಾಶವನ್ನು ನೀಡಬಾರದು. ನಾನು ಮಹಿಳೆಯರಿಗೆ ಅವಮಾನ ಮಾಡುತ್ತಿಲ್ಲ. ಹೇಳಿಕೆಯ ಮೂಲಕ ಗೌರವಿಸುತ್ತಿದ್ದೇನೆಂದು ಹೇಳಿದ್ದಾರೆ.

ಇದೇ ವೇಳೆ ಈ ಹಿಂದೆ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಯುವತಿಯ ತುಂಡುಡುಗೆಯೇ ಕಾರಣ ಎಂದು ಹೇಳಿದ್ದ ಹೇಳಿಕೆ ಕುರಿತಂತೆ ಸಮರ್ಥನೆ ನೀಡಿರುವ ಅವರು, ಮಹಿಳೆಯರ ಮೇಲೆ ನನಗೆ ಗೌರವವಿದೆ. ಪ್ರತೀ ಹೆಣ್ಣು ಮಗಳನ್ನು ನನ್ನ ಮಗಳು ಹಾಗೂ ತಾಯಿಯಂತೆ ಕಾಣುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ತಾಯಿ ಕೂಡ ಒಂದು ಹೆಣ್ಣು. ನನ್ನ ಮಗಳಿಗಾಗಿ ನನ್ನ ಜೀವನವನ್ನೇ ತ್ಯಾಗ ಮಾಡುತ್ತೇನೆ. ಇನ್ನು ಮಹಿಳೆಯರಿಗೆ ಹೇಗೆ ಅವಮಾನು ಮಾಡುತ್ತೇನೆ? ಎಂದು ಹೇಳಿದ್ದಾರೆ.

ದೇಶದಲ್ಲಿ ಕಾನೂನನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಯುವತಿಯರು ಮನೆಬಿಟ್ಟು ಹೊರಗಿದ್ದರೆ, ಆಕೆ ಅಪಹರಣಕ್ಕೊಳಗಾಗುತ್ತಾಳೆ. ಇದಕ್ಕೆ ದೆಹಲಿಯ ನಿರ್ಭಯಾ ಪ್ರಕರಣವೇ ದೊಡ್ಡ ಉದಾಹರಣೆಯಾಗಿದೆ.

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯನ್ನು ನೀಡಲಾಗಿದೆ. ಇಸ್ಲಾಂ ಧರ್ಮ ಕಳೆದ 1500 ವರ್ಷಗಳಿಂದಲೂ ಹೇಳುತ್ತಾ ಬಂದಿದೆ. ಇಷ್ಟಾದರೂ ದೇಶದಲ್ಲಿ ಅಪರಾಧಗಳು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತಲೇ ಬಂದಿದೆ ಎಂದು ಹೇಳಿದ್ದಾರೆ.

ನಂತರ ಮತ್ತೆ ಈ ಹಿಂದೆ ನೀಡಿದ್ದ ಹೇಳಿಕೆಯನ್ನೇ ಪುನರುಚ್ಛಾರಿಸಿರುವ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯೇ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಶ್ಲೀಲ, ನಗ್ನತೆಯನ್ನೇ ತೋರಿಸುತ್ತಿರುತ್ತಾರೆ. ಮನೆಯಲ್ಲಿ ಸಿನಿಮಾ ನೋಡುವಾಗ ಈ ರೀತಿ ದೃಶ್ಯಗಳು ಬಂದರೆ, ಒಬ್ಬ ತಂದೆಯಾದವನು ತನ್ನ ಮಕ್ಕಳೊಂದಿಗೆ ಅಂತಹ ದೃಶ್ಯವನ್ನು ನೋಡಲು ಇಚ್ಛಿಸುವುದಿಲ್ಲ.

ಭಾರತೀಯ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿರುವ ಯಾವುದೇ ತಂದೆಯಾದರೂ ನಗ್ನ ಚಿತ್ರಗಳನ್ನು ನೋಡಲು ಬಿಡುವುದಿಲ್ಲ. ಇದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ಇಂತಹ ಚಿತ್ರಗಳು ಬಂದಾಗ ನನ್ನ ಮಗಳು ಎದ್ದು ಹೊರಗೆ ಹೋಗುತ್ತಾಳೆ. ಇಲ್ಲವೇ, ಮನೆಯವರು ಚಾನೆಲ್ ಬದಲಾಯಿಸುತ್ತಾರೆ. ನನಗೆ ನನ್ನ ಮಗಳ ಸುರಕ್ಷತೆಯಷ್ಟೇ ಮುಖ್ಯ. ಕಾಮುಕರ ಕೈಗೆ ಸಿಗದಂತೆ ನೋಡಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಮವನ್ನು ತೋರಿಸಿದರೆ, ಆ ಮಹಿಳೆ ಹೆಚ್ಚು ಫ್ಯಾಷನ್ ಎಂದು ಹೇಳುತ್ತಾರೆ. ನನ್ನ ಮಗಳು ಅಥವಾ ತಂಗಿಯೇನಾದರೂ ಹೊಸವರ್ಷ ಆಚರಣೆ ಮಾಡಲು ಪತಿ ಅಥವಾ ಸಹೋದರರು ಜೊತೆಗೆ ಇಲ್ಲದೆಯೇ ಮಧ್ಯರಾತ್ರಿ ಹೊರಗೆ ಹೋದರೆ ಅದು ಸರಿಯಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com