ಸಂಭವಿಸಬಹುದಾಗಿದ್ದ ರೈಲು ದುರಂತ ತಪ್ಪಿಸಿದ ಚಾಲಕರ ಸಮಯ ಪ್ರಜ್ಞೆ!

ಗುಜರಾತ್ ನಲ್ಲಿ ಸಂಭವಿಸಬಹುದಾಗಿದ್ದ ಭಾರಿ ಪ್ರಮಾಣದ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ.
ಹಳಿಯಲ್ಲಿ ಬಿರುಕು
ಹಳಿಯಲ್ಲಿ ಬಿರುಕು
Updated on: 

ಅಹ್ಮದಾಬಾದ್: ಗುಜರಾತ್ ನಲ್ಲಿ ಸಂಭವಿಸಬಹುದಾಗಿದ್ದ ಭಾರಿ ಪ್ರಮಾಣದ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ.

ಶುಕ್ರವಾರ ಉಜ್ಜೈನ್-ಮೆಮು ರೈಲು ಆಶ್ಚರ್ಯಕರ ರೀತಿಯಲ್ಲಿ ಅಪಘಾತದಿಂದ ಪಾರಾಗಿದ್ದು, ರೈಲು ಗುಜರಾತ್ ನ ಧಾಮರ್ಡಾ ರೈಲು ನಿಲ್ದಾಣದತ್ತ ಚಲಿಸುತ್ತಿತ್ತು. ಈ ವೇಳೆ ಹಳಿಯಲ್ಲಿ ಬಾರಿ ಪ್ರಮಾಣದ ಬಿರುಕು ಉಂಟಾಗಿತ್ತು.  ರೈಲಿನ ಎಂಜಿನ್ ಚಕ್ರಕ್ಕೆ ಬಿರುಕಿನ ಅನುಭವವಾಗುತ್ತಿದ್ದಂತೆಯೇ ಎಂಜಿನ್ ಚಾಲಕ ಕೂಡಲೇ ತುರ್ತಾಗಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾನೆ. ಬಳಿಕ ರೈಲು ಇಳಿದು ನೋಡಿದಾಗ ಹಳಿಯಲ್ಲಿ ಭಾರಿ ಪ್ರಮಾಣದ ಬಿರುಕು ಕಂಡುಬಂದಿದೆ.

ಹೀಗಾಗಿ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿದ ಚಾಲಕ ವಿಚಾರ ಮುಟ್ಟಿಸಿದ್ದಾನೆ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗಗಳನ್ನು  ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ನಡೆಯುವುದಕ್ಕೂ ಕೆಲವೇ ನಿಮಿಷಗಳ ಮುನ್ನ ಕೋಲ್ಕತಾ-ಜಮ್ಮು ತವಿ ಎಕ್ಸ್ ಪ್ರೆಸ್ ರೈಲು ಸಂಚರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ನವೆಂಬರ್ ನಲ್ಲಿ ಕಾನ್ಪುರದ ಫುಖರಾಯನ್ ಸಮೀಪ ಇಂದೋರ್-ರಾಜೇಂದ್ರ ನಗರ ಎಕ್ಸ್ ಪ್ರೆಸ್ ರೈಲು ದುರಂತಕ್ಕೀಡಾಗಿ 150 ಮಂದಿ ಸಾವನ್ನಪ್ಪಿ. 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com