ರಸ್ತೆಯಲ್ಲಿ ಸಿಕ್ಕ ಸಿಕ್ಕ ಹುಡುಗಿಯರಿಗೆ ಚುಂಬಿಸಲು ಯತ್ನಿಸಿದ ಯುವಕ: ವಿಡಿಯೋ ವೈರಲ್

ರಸ್ತೆಯಲ್ಲಿ ತೆರಳುತ್ತಿದ್ದ ಹುಡುಗಿಯರಿಗೆ ಮುತ್ತಿಕ್ಕಲು ವ್ಯಕ್ತಿಯೊಬ್ಬ ಯತ್ನಿಸಿದ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ದೆಹಲಿ ಪೊಲೀಸರು ತನಿಖೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಸ್ತೆಯಲ್ಲಿ ತೆರಳುತ್ತಿದ್ದ ಹುಡುಗಿಯರಿಗೆ ಮುತ್ತಿಕ್ಕಲು ವ್ಯಕ್ತಿಯೊಬ್ಬ ಯತ್ನಿಸಿದ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೆಹಲಿಯ ಪ್ರಸಿದ್ಧ ಸ್ಥಳವಾದ ಕೊನ್ನಾಘಾಟ್ ಪ್ರದೇಶದಲ್ಲಿ  ಯುವಕನೊಬ್ಬ ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯರಿಗೆ ಚುಂಬಿಸಲು ಯತ್ನಿಸಿ ಅಲ್ಲಿಂದ ಓಡಿಹೋಗುತ್ತಿರುವ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು. ಈ ನಕಲಿ ವಿಡಿಯೋ ವೈರಲ್ ಆಗಿದೆ.

ಮಾಧ್ಯಮಗಳ ಮೂಲಕ ದೆಹಲಿ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಅಶ್ಲೀಲ ವಿಡಿಯೋ ಫೇಸ್ ಬುಕ್ ಮತ್ತು ಯೂ ಟ್ಯೂಬ್ ಗಳಲ್ಲಿ ಹರಿದಾಡುತ್ತಿದ್ದು, ತನಿಖೆ ಆರಂಭಿಸಲಾಗಿದೆ ಎಂದು ದೆಹಲಿ ನಗರ ಪೊಲೀಸ್ ಜಂಟಿ ಆಯುಕ್ತ ದಿಪೇಂದ್ರ ಪಠಾಕ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ನಕಲಿ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ವಾಗಿದೆ. ಈ ವಿಡಿಯೋ ಬಿಡುಗಡೆಯಾದ ನಂತರ ಕ್ಷಮೆ ಕೇಳಿ ಮತ್ತೊಂದು ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ.

ವಿಡಿಯೋ ವಿಕೃತವಾಗಿದ್ದು, ಇದರಲ್ಲಿ ತಮಾಷೆ ಮಾಡುವಂತಹದ್ದು ಇಲ್ಲ, ಈ ಪ್ರಕರಣ ಸಂಬಂದ ಎಫ್ ಐ ಆರ್ ದಾಖಲಿಸಿ, ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com