ಹೊಸ ವರ್ಷದ ರಜೆ ನಂತರ ದೆಹಲಿಗೆ ಮರಳಿದ ರಾಹುಲ್‌ ಗಾಂಧಿ

ಹೊಸ ವರ್ಷದ ಮುನ್ನಾ ದಿನ ವಿದೇಶಕ್ಕೆ ಹಾರಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಹೊಸ ವರ್ಷದ ಮುನ್ನಾ ದಿನ ವಿದೇಶಕ್ಕೆ ಹಾರಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮುಗಿಸಿ ಮಂಗಳವಾರ ದೆಹಲಿಗೆ ಮರಳಿದ್ದಾರೆ. 
ರಾಹುಲ್‌ ಗಾಂಧಿ ಅವರು ಡಿಸೆಂಬರ್ 31ರಂದು, ದೇಶೀಯ ಬಂಧು, ಬಾಂಧವ, ಮಿತ್ರಾದಿ ಅಭಿಮಾನಿಗಳಿಗೆಲ್ಲ ಹೊಸ ವರ್ಷದ ಶುಭಾಶಯ ಕೋರಿ, ದಿಢೀರನೆ ಲಂಡನ್‌ಗೆ ತೆರಳಿದ್ದರು.
ಕಳೆದ ವರ್ಷ ಜೂನ್‌ 20ರಂದು ರಾಹುಲ್‌ ಗಾಂಧಿ ಕೆಲ ದಿನಗಳ ಮಟ್ಟಿಗೆಂದು ವಿದೇಶಕ್ಕೆ ಹೋಗಿದ್ದರು. 
ಕಳೆದ ನವೆಂಬರ್ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸುವುದಾಗಿ ಘೋಷಿಸಿದ ನಂತರ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರವಾಗಿ ಖಂಡಿಸಿದ್ದರು. ಈ ಸಂಬಂಧ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಒಂದು ತಿಂಗಳ ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೇ ರಾಹುಲ್ ವಿದೇಶಕ್ಕೆ ಹಾರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com