ದೂರು ಹಿಂಪಡೆಯುವಂತೆ ಪತಿ ಮೇಲೆ ಒತ್ತಡ ಹೇರಲಾಗುತ್ತಿದೆ- ಯೋಧನ ಪತ್ನಿ

ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಆರೋಪ ಪ್ರಕರಣ ಸಂಬಂಧಿಸಿದಂತೆ ದೂರು ಹಿಂಪಡೆಯುವಂತೆ ನನ್ನ ಪತಿ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂದು ತೇಜ್ ಬಹದ್ದೂರ್ ಯಾದವ್ ಅವರ ಪತ್ನಿ ಶರ್ಮಿಳಾ ಅವರು ಗುರುವಾರ...
ಅಧಿಕಾರಿಗಳ ವಿರುದ್ಧ ಆರೋಪ ವ್ಯಕ್ತಪಡಿಸಿದ್ದ ಯೋಧ ಹಾಗೂ ಅವರ ಪತ್ನಿ ಶರ್ಮಿಳಾ
ಅಧಿಕಾರಿಗಳ ವಿರುದ್ಧ ಆರೋಪ ವ್ಯಕ್ತಪಡಿಸಿದ್ದ ಯೋಧ ಹಾಗೂ ಅವರ ಪತ್ನಿ ಶರ್ಮಿಳಾ

ರೆವಾರಿ: ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಆರೋಪ ಪ್ರಕರಣ ಸಂಬಂಧಿಸಿದಂತೆ ದೂರು ಹಿಂಪಡೆಯುವಂತೆ ನನ್ನ ಪತಿ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂದು ತೇಜ್ ಬಹದ್ದೂರ್ ಯಾದವ್ ಅವರ ಪತ್ನಿ ಶರ್ಮಿಳಾ ಅವರು ಗುರುವಾರ ಆರೋಪಿಸಿದ್ದಾರೆ.

ವಿಡಿಯೋ ಬಹಿರಂಗಗೊಳಿಸಿದ ಬಳಿಕ ಪತಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೆಯಷ್ಟೇ ಪತಿ ನನ್ನನ್ನು ಸಂಪರ್ಕಿಸಿದ್ದು, ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿರುವುದಾಗಿ ಹೇಳಿಕೊಂಡರು. ದೂರು ಹಿಂಪಡೆಯುವಂತೆ ಹಾಗೂ ಕ್ಷಮೆಯಾಚಿಸುವಂತೆ ನನ್ನ ಮೇಲೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂದು ಹೇಳಿಕೊಂಡರು ಎಂದು ಶರ್ಮಿಳಾ ಅವರು ಹೇಳಿಕೊಂಡಿದ್ದಾರೆ.

ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರ ಕುರಿತಂತೆ ಬಿಎಸ್ ಎಫ್ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು, ಅಧಿಕಾರಿಗಳ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು, ಅಲ್ಲದೆ, ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.

ಯೋಧ ತೇಜ್ ಬಹದ್ದೂರ್ ಅವರ ಪತ್ನಿ ಶರ್ಮಿಳಾ ಅವರು ಪ್ರಕರಣ ಸಂಬಂಧ ಈ ಹಿಂದೆ ಪ್ರತಿಕ್ರಿಯೆ ನೀಡಿ, ಪತಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನನ್ನ ಪತಿ ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ವೇಳೆ ಪತಿ ಮಾನಸಿಕವಾಗಿ ಸರಿಯಿಲ್ಲ ಎಂಬುದೇ ಆಗಿದ್ದರೆ, ಅವರನ್ನು ಗಡಿಯಲ್ಲಿ ಏಕೆ ಕರ್ತವ್ಯಕ್ಕೆ ನಿಯೋಜಿಸಬೇಕಿತ್ತು ಎಂದು ಪ್ರಶ್ನಿಸಿದ್ದರು.

ಸೇನಾ ಯೋಧರ ಕಲ್ಯಾಣಕ್ಕಾಗಿ ನನ್ನ ಪತಿ ಏನು ಮಾಡಿದ್ದಾರೋ ಅದು ಸರಿಯಿದೆ. ಆಹಾರಬೇಕೆಂದು ಆಗ್ರಹಿಸಿರುವುದು ತಪ್ಪಲ್ಲ. ನನ್ನ ಪತಿ ಸತ್ಯವನ್ನೇ ಬಹಿರಂಗಪಡಿಸಿದ್ದಾರೆ. ಆದರೆ, ಅವರು ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು ಹೇಳುತ್ತಿರುವುದು ಸರಿಯಲ್ಲ. ಪತಿ ಮಾನಸಿಕವಾಗಿ ಸರಿಯಿಲ್ಲ ಎಂದು ಹೇಳುವ ಅಧಿಕಾರಿಗಳು ಅವರನ್ನೇಕೆ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಿತ್ತು?...ಸರ್ಕಾರ ಕೂಡಲೇ ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ನನ್ನ ಪತಿಗೆ ನ್ಯಾಯಕೊಡಿಸಬೇಕೆಂದು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com