ಬೆಂಗಳೂರು: ನಗದು ರಹಿತ ವಹಿವಾಟು ಯೋಜನೆ ಪರಿಚಯಿಸಿದ ನಂತರ ಆಧಾರ್ ನೋಂದಣಿಯಲ್ಲೂ ಏರಿಕೆ ಕಂಡು ಬಂದಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ನಗದು ರಹಿತ ವಹಿವಾಟು ನಡೆಸುವುದಕ್ಕೆ ಪೂರಕವಾಗಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಬೆಸೆಯುವ ಪ್ರಕ್ರಿಯೆ ಪ್ರಾರಂಭಗೊಂಡ ನಂತರ ಕಳೆದ 2 ತಿಂಗಳುಗಳಲ್ಲಿ ಆಧಾರ್ ನೋಂದಣಿಯೂ ಹೆಚ್ಚಾಗತೊಡಗಿದ್ದು, ಡಿಸೆಂಬರ್ ತಿಂಗಳಲ್ಲಿ 1.6 ಕೋಟಿ ಜನರು ಆಧಾರ್ ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಹೇಳಿದ್ದಾರೆ.
1.4 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಜನರು ಆಧಾರ್ ಗೆ ನೋಂದಣಿ ಮಾಡಿಸಿಕೊಂಡಿದ್ದು ಮುಂದಿನ 6 ತಿಂಗಳ ವರೆಗೆ ಸರಾಸರಿ 1.5 ರಷ್ಟು ನೋಂದಣಿಯಾಗಲಿದೆ ಯುಐಡಿಎಐ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವರೆಗೂ 38 ಕೋಟಿ ಜನರು ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಬೆಸೆದಿದ್ದರೆ, ಒಟ್ಟು 48 ಕೋಟಿ ಬ್ಯಾಂಕ್ ಖಾತೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಬೆಸೆಯಲಾಗಿದೆ, ಮುಂದಿನ 6 ತಿಂಗಳ ವರೆಗೆ ಪ್ರತಿ ತಿಂಗಳು ಸರಾಸರಿ 1.5 ಕೋಟಿ ಜನರು ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ಯುಐಡಿಎಐ ಹೇಳಿದೆ.