ವಿನಯ್ ಕಟಿಯಾರ್, ಶರದ್ ಯಾದವ್ ಹೇಳಿಕೆ ಖಂಡಿಸಿದ ವೆಂಕಯ್ಯ ನಾಯ್ಡು

ಪ್ರಿಯಾಂಕಾ ಗಾಂಧಿಗಿಂತ ಸುಂದರ ಮಹಿಳಾ ಸ್ಟಾರ್ ಪ್ರಚಾರಕರು ನಮ್ಮ ಪಕ್ಷದಲ್ಲಿದ್ದಾರೆ ಎಂದಿದ್ದ ಬಿಜೆಪಿ ಹಿರಿಯ ನಾಯಕ...
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ನವದೆಹಲಿ: ಪ್ರಿಯಾಂಕಾ ಗಾಂಧಿಗಿಂತ ಸುಂದರ ಮಹಿಳಾ ಸ್ಟಾರ್ ಪ್ರಚಾರಕರು ನಮ್ಮ ಪಕ್ಷದಲ್ಲಿದ್ದಾರೆ ಎಂದಿದ್ದ ಬಿಜೆಪಿ ಹಿರಿಯ ನಾಯಕ ವಿನಯ್ ಕಟಿಯಾರ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಬುಧವಾರ ಹೇಳಿದ್ದಾರೆ.
ವಿನಯ್ ಕಟಿಯಾರ್ ಹೇಳಿಕೆಯನ್ನು ಖಂಡಿಸಿದ ವೆಂಕಯ್ಯ ನಾಯ್ಡು, ಮಗಳ ಮಾನಕ್ಕಿಂತ ಓಟಿನ ಮಾನ ದೊಡ್ಡದು ಎಂದಿದ್ದ ಜನತಾ ದಳ(ಯು) ನಾಯಕ ಶರದ್ ಯಾದವ್ ಅವರ ಹೇಳಿಕೆಯನ್ನು ಸಹ ಒಪ್ಪಿಕೊಳ್ಳಲ್ಲ ಎಂದಿದ್ದಾರೆ.
ವಿನಯ್ ಕಟಿಯಾರ್ ಮತ್ತು ಶರದ್ ಯಾದವ್ ಇಬ್ಬರ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಾನು ಖಂಡಿಸುತ್ತೇನೆ ಎಂದು ನಾಯ್ಡು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ವಿನಯ್ ಕಟಿಯಾರ್ ಅವರು, ನಮ್ಮ ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರಿದ್ದಾರೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com