ಪ್ರತಿಭಟನೆಯಲ್ಲಿ ಬಿನ್ ಲ್ಯಾಡನ್ ಭಾವಚಿತ್ರ; ಪಟ್ಟಭದ್ರ ಹಿತಾಸಕ್ತಿಗಳ ಕಾನೂನು ಕ್ರಮ: ಪನ್ನೀರ್ ಸೆಲ್ವಂ
ಪ್ರತಿಭಟನೆಯಲ್ಲಿ ತೊಡಗಿದ್ದ ರಾಷ್ಟ್ರವಿರೋಧಿಗಳು, ಸಮಾಜ ವಿರೋಧಿಗಳನ್ನು ಚದುರಿಸಲು ಪೊಲೀಸರು ಸಣ್ಣ ಪ್ರಮಾಣದಲ್ಲಿ ಬಲಪ್ರಯೋಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

Published On :
ಚೆನ್ನೈ: ಜಲ್ಲಿಕಟ್ಟು ಪ್ರತಿಭಟನೆ ಹಾಗೂ ಮರೀನಾ ಬೀಚ್ ಬಳಿ ನಡೆಡಿದ್ದ ಅವಗಢಗಳ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಪನ್ನೀರ್ ಸೆಲ್ವಂ, ಪ್ರತಿಭಟನೆಯಲ್ಲಿ ತೊಡಗಿದ್ದ ರಾಷ್ಟ್ರವಿರೋಧಿಗಳು, ಸಮಾಜ ವಿರೋಧಿಗಳನ್ನು ಚದುರಿಸಲು ಪೊಲೀಸರು ಸಣ್ಣ ಪ್ರಮಾಣದಲ್ಲಿ ಬಲಪ್ರಯೋಗ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರವಿರೋಧಿಗಳು, ಸಮಾಜಘಾತುಕ ಶಕ್ತಿಗಳು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಗಳಿಂದ ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ನುಸುಳುವ ಯತ್ನ ನಡೆದಿತ್ತು ಆದ್ದರಿಂದ ಪೊಲೀಸರು ಸಾರ್ವಜನಿಕ ಆಸ್ತಿಪಾಸಿಗಳನ್ನು ರಕ್ಷಿಸಲು ಹಾಗೂ ಜನರನ್ನು ರಕ್ಷಿಸಲು ಬಲ ಪ್ರಯೋಗ ಮಾಡಬೇಕಾಯಿತು ಎಂದು ಸಮರ್ಥನೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿದ್ದರ ಬಗ್ಗೆ ನ್ಯಾಯಾಂಗ ಸಮಿತಿ ತನಿಖೆ ನಡೆಸಬೇಕೆಂಬ ಪ್ರತಿಪಕ್ಷ ನಾಯಕ ಎಂಕೆ ಸ್ಟಾಲಿನ್ ಆಗ್ರಹಕ್ಕೆ ಸಿಎಂ ಪನ್ನೀರ್ ಸೆಲ್ವಂ ಉತ್ತರಿಸುತ್ತಿದ್ದರು.
ಇನ್ನು ಪ್ರತಿಭಟನೆಯಲ್ಲಿ ಒಸಾಮ ಬಿನ್ ಲ್ಯಾಡನ್ ಭಾವ ಚಿತ್ರ!
ಪ್ರತಿಭಟನೆಯಲ್ಲಿ ಒಸಾಮ ಬಿನ್ ಲ್ಯಾಡನ್ ಭಾವಚಿತ್ರ ಪ್ರದರ್ಶಿಸಿದ್ದು, ಒ ಪನ್ನೀರ್ ಸೆಲ್ವಂ ಬಗ್ಗೆ ಆಕ್ಷೇಪಾರ್ಹ ಫಲಕಗಳನ್ನು ಪ್ರದರ್ಶಿಸಿದ ಘಟನೆಗಳ ಬಗ್ಗೆಯೂ ಮಾತನಾಡಿರುವ ಪನ್ನೀರ್ ಸೆಲ್ವಂ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪಟ್ಟಭದ್ರ ಹಿತಾಸಕ್ತಿಗಳು, ಪ್ರತಿಭಟನೆಯನ್ನು ಜ.26 ರ ವರೆಗೆ ನಡೆಸಿ ಗಣರಾಜ್ಯೋತ್ಸವ ದಿನಾಚರಣೆಗೆ ಅಡ್ಡಿ ಉಂಟು ಮಾಡಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಪ್ರತಿಭಟನೆಯ ಉದ್ದೇಶವನ್ನು ದಿಕ್ಕು ತಪ್ಪಿಸಿ ಗಣರಾಜ್ಯ ದಿನಾಚರಣೆಯ ದಿನವನ್ನು ಕರಾಳ ದಿನವನ್ನಾಗಿಸಿ ಪ್ರತ್ಯೇಕ ತಮಿಳುನಾಡು ರಾಷ್ಟ್ರದ ಬೇಡಿಕೆ ಇಡಲು ಮುಂದಾಗಿದ್ದರು. ಅಂತಹ ಪಟ್ಟಭದ್ರ ಹಿತಾಸಕ್ತಿ, ರಾಷ್ಟ್ರವಿರೋಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತಮಿಳುನಾಡುTamil Naduಪನ್ನೀರ್ ಸೆಲ್ವಂJallikattu protestsOsama Bin Laden pictureTN CMಜಲ್ಲಿಕಟ್ಟು ಪ್ರತಿಭಟನೆಬಿನ್ ಲ್ಯಾಡನ್ ಭಾವಚಿತ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


