ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು

ಜಮ್ಮು ಮತ್ತು ಕಾಶ್ಮೀರದ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರೀ ಹಿಮಪಾತವಾಗುವ ಕುರಿತು ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ ಶನಿವಾರ ಎಚ್ಚರಿಕೆ ನೀಡಿದೆ...
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು
Updated on: 

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರೀ ಹಿಮಪಾತವಾಗುವ ಕುರಿತು ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ ಶನಿವಾರ ಎಚ್ಚರಿಕೆ ನೀಡಿದೆ.

ಕಣಿವೆ ರಾಜ್ಯಗಳಾದ ಕುಪ್ವಾರ, ಬಂಡಿಪೋರ, ಬಾರಾಮುಲ್ಲಾ, ಗಂದೇರ್ಬಾಲ್, ಕುಲ್ಗಾಂ, ಕಾರ್ಗಿಲ್ ಜಿಲ್ಲೆ ಸೇರಿದೆ ಕಾಶ್ಮೀರದ ಹಲವೆಗೆ ಮುಂದಿನ 24 ಗಂಟೆಯೊಳಗೆ ಭಾರೀ ಪ್ರಮಾಣದ ಹಿಮಪಾತವಾಗಲಿದ್ದು, ಅಪಾಯಕಾರಿ ಹಿಮ ಕುಸಿತವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಲೆಹ್, ಕಾರ್ಗಿಲ್, ಕಾಶ್ಮೀರದ ಉಪ ಆಯುಕ್ತರಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಹಿಮಗಳ ಮಧ್ಯೆ ಜನರು ಹೋಗದಂತೆ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ರೀತಿಯ ಹಾನಿಗಳು ಸಂಭವಿಸಿದರಲು ಜನರು ತಮ್ಮ ಮನೆಗಳ ಮೇಲಿನ ಮಂಜನ್ನು ಆಗಾಗ ತೆಗೆಯುತ್ತಿರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದೊಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದ ಹವಮಾನದಲ್ಲಿ ಭಾರಿ ಏರುಪೇರಾಗುತ್ತಿದ್ದು, ಭಾರಿ ಪ್ರಮಾಣದ ಹಿಮಪಾತವಾಗುತ್ತಿದೆ. ತಾಪಮಾನ ಕುಸಿತ ಹಾಗೂ ಹಿಮಪಾತಗಳಿಂದಾಗಿ ಗಡಿಯಲ್ಲಿ ಸೈನಿಕರು ಕರ್ತವ್ಯ  ನಿರ್ವಹಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದ ಪರಿಣಾಮ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 16 ಯೋಧರು ಹುತಾತ್ಮರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com