ಮುಂಬೈ: ಮಂದಿರ, ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧ ಹೋರಾಡಿ ಯಶಸ್ವಿಯಾದ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರು ಇದೀಗ ಮದ್ಯ ಮುಕ್ತ ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ಮದ್ಯ ನಿಷೇಧಕ್ಕೆ ಆಗ್ರಹಿಸಿ ಶೀಘ್ರದಲ್ಲೇ ರಾಜ್ಯಾಂದತ ಆಂದೋಲನ ನಡೆಸುತ್ತೇನೆ ಮತ್ತು ಈ ಆಂದೋಲನಕ್ಕೆ ಪುಣೆಯಿಂದ ಚಾಲನೆ ನೀಡಲಾಗುವುದು ಎಂದು ತೃಪ್ತಿ ದೇಸಾಯಿ ತಿಳಿಸಿದ್ದಾರೆ.
ಅತಿ ಹೆಚ್ಚು ಮದ್ಯ ಸೇವಿಸುವುದು ಪುರುಷರು. ಆದರೆ ಅತಿ ಹೆಚ್ಚು ನೋವು ಅನುಭವಿಸುವುದು ಮಾತ್ರ ಮಹಿಳೆಯರು. ಅಲ್ಲದೆ ಮದ್ಯ ಸೇವನೆಯಿಂದ ಮಹಿಳೆಯರ ಮೇಲಿನ ದೌರ್ಜನ ಹೆಚ್ಚುತ್ತಿದೆ. ಹೀಗಾಗಿ ಮದ್ಯದ ವಿರುದ್ಧ ಹೋರಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಚಂದ್ರಾಪುರ ಜಿಲ್ಲೆಯಲ್ಲಿ ಮದ್ಯ ನಿಷೇಧ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಏಕೆ ಮದ್ಯ ನಿಷೇಧಿಸಬಾರದು ಎಂದು ತೃಪ್ತಿ ದೇಸಾಯಿ ಪ್ರಶ್ನಿಸಿದ್ದಾರೆ.