ಪಾಟ್ನಾ: ರಾಷ್ಟ್ರೀಯ ಜನತಾದಳ(ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಮಕ್ಕಳು ಹಾಗೂ ಆಪ್ತರ ಮನೆ ಮೇಲೆ ನಿರಂತರವಾಗಿ ಸಿಬಿಐ ದಾಳಿ ಹಿನ್ನೆಲೆ ಬಿಹಾರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿ ಯಾದವ್ ರಾಜಿನಾಮೆ ನೀಡಬೇಕು ಎಂಬ ಬಿಜೆಪಿ ಆಗ್ರಹವನ್ನು ಆರ್ಜೆಡಿ ತಿರಸ್ಕರಿಸಿದೆ.
ನಿರಂತರ ಸಿಬಿಐ ದಾಳಿಯಿಂದ ತೀವ್ರ ಮುಜುಗರಕ್ಕೀಡಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜಿನಾಮೆ ಕುರಿತಂತೆ ಚರ್ಚಿಸಲು ಜುಲೈ 11ರಂದು ಶಾಸಕ ಸಭೆ ಕರೆದಿದ್ದು ನಾಳಿನ ಜೆಡಿಯು ಸಭೆಯತ್ತ ಎಲ್ಲರ ಚಿತ್ತ ಹರಿದಿದೆ.
ಈ ಮಧ್ಯೆ ತೇಜ್ವಸಿ ಯಾದವ್ ರಾಜಿನಾಮೆ ಕುರಿತು ಯಾವುದೇ ಪ್ರಶ್ನೆ ಇಲ್ಲ ಎಂದು ಆರ್ಜೆಡಿ ಮುಖಂಡರು ಘೋಷಿಸಿದ್ದಾರೆ. ಲಾಲು ಪುತ್ರದ ಮನೆ ಮೇಲೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದನ್ನು ಅಸ್ತ್ರವಾಗಿಟ್ಟುಕೊಂಡು ವಿರೋಧ ಪಕ್ಷವಾಗಿರುವ ಬಿಜೆಪಿ ತೇಜಸ್ವಿ ಯಾದವ್ ರಾಜಿನಾಮೆಗೆ ಪಟ್ಟು ಹಿಡಿದಿದ್ದಾರೆ.