ದಾಳಿ ಕುರಿತಂತೆ ಕೇಂದ್ರ ವಿರುದ್ಧದ ಕಿಡಿಕಾರಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಆರ್.ಎಸ್. ಸುರ್ಜೇವಾಲಾ, ಜೂನ್. 25 ರಂದೇ ಗುಪ್ತಚರ ಇಲಾಖೆ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆಂದು ಎಚ್ಚರಿಕೆ ನೀಡಿತ್ತು. ಆದರೂ ಕೇಂದ್ರ ಸರ್ಕಾರ ಸೂಕ್ತ ರೀತಿಯ ಭದ್ರತಾ ಕ್ರಮಗಳನ್ನೇಕೆ ಕೈಗೊಳ್ಳಲಿಲ್ಲ. ಇದು ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳ ವೈಫಲ್ಯ ಹಾಗೂ ಗಂಭೀರವಾದ ವಿಚಾರವಾಗಿದೆ ಎಂದು ಹೇಳಿದ್ದಾರೆ.