ನಾನು ಮುಗ್ಧ, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ: ನಟ ದಿಲೀಪ್

ಮಲಯಾಳಂನ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ...
ಅಲುವಾ ಉಪ ಕಾರಾಗೃಹಕ್ಕೆ ನಟ ದಿಲೀಪ್ ರನ್ನು ಕರೆದೊಯ್ಯುತ್ತಿರುವ ಪೊಲೀಸರು
ಅಲುವಾ ಉಪ ಕಾರಾಗೃಹಕ್ಕೆ ನಟ ದಿಲೀಪ್ ರನ್ನು ಕರೆದೊಯ್ಯುತ್ತಿರುವ ಪೊಲೀಸರು
Updated on: 
ಅಲುವಾ: ಮಲಯಾಳಂನ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಸಂಜೆ ಬಂಧತರಾದ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಿನ್ನೆ ಸಂಜೆ ನಟ ದಿಲೀಪ್ ರನ್ನು ಗುಪ್ತ ಸ್ಥಳದಲ್ಲಿ ಪೊಲೀಸರ ತಂಡ ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿ ತರುವಾಯ ಬಂಧಿಸಿತ್ತು. ನಿನ್ನೆ ಸಂಜೆ ಸುಮಾರು 7.20ರ ಹೊತ್ತಿಗೆ ಅಲುವಾ ಪೊಲೀಸ್ ಕ್ಲಬ್ ಗೆ ಕರೆ ತರಲಾಯಿತು.
ಇಂದು ಬೆಳಗ್ಗೆ ಅಲುವಾ ಉಪ ಕಾರಾಗೃಹಕ್ಕೆ ಕರೆದೊಯ್ಯುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿಲೀಪ್, ನಾನು ಈ ವಿಷಯದಲ್ಲಿ ಮುಗ್ಧನಾಗಿದ್ದು, ನನ್ನ ಮುಗ್ಧತನವನ್ನು ಸಾಬೀತುಪಡಿಸುತ್ತೇನೆ. ನಾನು ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿದ್ದಾರೆ.
ನಿನ್ನೆಯ ಘಟನೆಗೆ ಕಾಕತಾಳೀಯ ಎಂಬಂತೆ ದಿಲೀಪ್ ರ ಇತ್ತೀಚಿನ ಕೊನೆಯ ಚಿತ್ರ 2016ರ ವೆಲ್ ಕಮ್ ಟು ಸೆಂಟ್ರಲ್ ಜೈಲ್ ಆಗಿದೆ. ಇಂದು ಜೈಲಿನ ಎದುರು ಜಮಾಯಿಸಿದ್ದ ಜನರು ವೆಲ್ ಕಮ್ ಟು ಸೆಂಟ್ರಲ್ ಜೈಲ್ ಎಂದು ಕೂಗುತ್ತಿದ್ದುದು ಕೇಳಿಬಂತು.
ಕೊಚ್ಚಿಯಲ್ಲಿ ದಿಲೀಪ್ ಒಡೆತನದ ಹೊಟೇಲ್ ಮೇಲೆ ಉದ್ರಿಕ್ತ ಯುವಕರ ಗುಂಪು ದಾಳಿ ನಡೆಸಿ ಕಿಟಕಿ, ಗಾಜುಗಳನ್ನು ಒಡೆದರು. 
ದಿಲೀಪ್ ಪರ ವಕೀಲ ಕೆ. ರಾಮ್ ಕುಮಾರ್ ಮಾತನಾಡಿ, ಇಂದು ಸಂಜೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗುವುದು. ಅದು ಶುಕ್ರವಾರ ಅಂಗಮಲಿ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿದರು. ಇನ್ನೊಂದೆಡೆ ಪೊಲೀಸರು ದಿಲೀಪ್ ರ ಹೆಚ್ಚಿನ ವಿಚಾರಣೆಗೆ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲು ಅರ್ಜಿ ಸಲ್ಲಿಸಲಿದ್ದಾರೆ.
ಕಳೆದ ಫೆಬ್ರವರಿ 17ರಂದು ಮಲಯಾಳಂನ ಖ್ಯಾತ ನಟಿಯ ಅಪಹರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ದಿಲೀಪ್ ಅವರು ಆರೋಪಿ ಎಂದು ಸಾಬೀತುಪಡಿಸುವ 19 ಸಾಕ್ಷಿಗಳು ಸಿಕ್ಕಿದ ಆಧಾರದ ಮೇಲೆ ಅವರನ್ನು ಬಂಧಿಸಲು ಪೊಲೀಸರು ನಿರ್ಧರಿಸಿದರು. 
ನಟಿ ಚಿತ್ರದ ಶೂಟಿಂಗ್ ಮುಗಿಸಿ ತ್ರಿಶೂರ್ ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರಿನಲ್ಲಿ ಅಪಹರಿಸಿ ಸುಮಾರು 2 ಗಂಟೆಗಳ ಕಾಲ ಸುತ್ತಿಸಿ ರಾತ್ರಿ ಹೊತ್ತು ನಿರ್ದೇಶಕರೊಬ್ಬರ ಮನೆಯ ಹತ್ತಿರ ಕಾರಿನಿಂದ ಹೊರಗೆ ದಬ್ಬಿ ಪರಾರಿಯಾಗಿದ್ದರು.ಆರೋಪಿಗಳು ದಾರಿಯುದ್ದಕ್ಕೂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದರು. 
ಈ ಸಂಬಂಧ ಪೊಲೀಸರು ಘಟನೆ ನಡೆದ ಒಂದು ವಾರ ಬಳಿಕ ಪಲ್ಸರ್ ಸುನಿ ಮತ್ತು ಆತನ ಸಹಚರರನ್ನು ಬಂಧಿಸಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com