ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಿದ ನಂತರ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಪುರಾಣದ ಕಥೆಯಲ್ಲಿನ ಹನುಮಂತ ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಲ್ಲಿ ಇಡೀ ಲಂಕೆಯನ್ನು ಸುಟ್ಟು ಬೂದಿ ಮಾಡಿದಂತೆ, ಗೋರಕ್ಷಣೆ ಹೆಸರಲ್ಲಿ ಬಾಲಕ್ಕೆ ಬೆಂಕಿ ಹಚ್ಚಿಕೊಂಡಿರುವ ಕೋತಿಗಳನ್ನು ಸ್ವತಃ ಪ್ರಧಾನಿಯವರೇ ಬಿಡುಗಡೆ ಮಾಡಿದ್ದಾರೆ, ಕೇಂದ್ರ ಹಚ್ಚಿರುವ ಈ ಬೆಂಕಿಯನ್ನು ರಾಜ್ಯಗಳು ಆರಿಸಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.