ತಮಿಳುನಾಡು ಶಾಸಕರ ವೇತನ, ಭತ್ಯೆ ಡಬಲ್

ಒಂದು ಕಡೆ ತೀವ್ರ ಬರಗಾಲದಿಂದ ತತ್ತರಿಸಿರುವ ತಮಿಳುನಾಡು ರೈತರು ಸಾಲ ಮನ್ನಾಗೆ ಆಗ್ರಹಿಸಿ ದೆಹಲಿಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ....
ಪಳನಿಸ್ವಾಮಿ
ಪಳನಿಸ್ವಾಮಿ
Updated on: 
ಚೆನ್ನೈ: ಒಂದು ಕಡೆ ತೀವ್ರ ಬರಗಾಲದಿಂದ ತತ್ತರಿಸಿರುವ ತಮಿಳುನಾಡು ರೈತರು ಸಾಲ ಮನ್ನಾಗೆ ಆಗ್ರಹಿಸಿ ದೆಹಲಿಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದು ಕಡೆ ತಮಿಳು ನಾಡು ಸರ್ಕಾರ ರೈತರಿಗೂ ತಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಶಾಸಕರ ವೇತನ ಮತ್ತು ಭತ್ಯೆಯನ್ನು ಭರ್ಜರಿ ಏರಿಕೆ ಮಾಡಿದೆ.
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಬುಧವಾರ ಶಾಸಕರ ವೇತನ ಮತ್ತು ಭತ್ಯೆಯನ್ನು ಡಬಲ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ. 55 ಸಾವಿರ ರುಪಾಯಿ ಇದ್ದ ಶಾಸಕರ ವೇತನವನ್ನು 1,05,000 ರುಪಾಯಿಗೆ ಹೆಚ್ಚಳ ಮಾಡುವುದಾಗಿ ಇಂದು ಸಿಎಂ ಘೋಷಿಸಿದ್ದಾರೆ. ಅಲ್ಲದೆ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ವಾರ್ಷಿಕ 2 ಕೋಟಿಯಿಂದ 2.5 ಕೋಟಿಗೆ ಏರಿಕೆ ಮಾಡಿದ್ದಾರೆ.
ಪ್ರಸ್ತುತ ತಮಿಳುನಾಡಿನ ಶಾಸಕರು ಮಾಸಿಕ 55,000 ವೇತನ ಪಡೆಯುತ್ತಿದ್ದು, ಇನ್ನು ಮುಂದೆ 1,05 ಲಕ್ಷ ರುಪಾಯಿಗೆ ಹೆಚ್ಚಿಸುವುದಾಗಿ ಸಿಎಂ ಕೆ.ಪಳನಿಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ವೇತನ ಜು.1ರಿಂದಲೇ ಜಾರಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com