ಜು.27-28ರಂದು ಬ್ರಿಕ್ಸ್ ಎನ್ಎಸ್ಎ ಸಭೆ: ಬೀಜಿಂಗ್ ಅಜಿತ್ ದೋವಲ್ ಭೇಟಿ
ಡೋಕ್ಲಾಮ್ ವಿವಾದ ಸಂಬಂಧ ಭಾರತ ಮತ್ತು ಚೀನಾ ಗಡಿಗಳಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣದ ನಡುವೆಯೇ ಚೀನಾದ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್...
ನವದೆಹಲಿ: ಡೋಕ್ಲಾಮ್ ವಿವಾದ ಸಂಬಂಧ ಭಾರತ ಮತ್ತು ಚೀನಾ ಗಡಿಗಳಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣದ ನಡುವೆಯೇ ಚೀನಾದ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರು ಪಾಲ್ಗೊಳ್ಳಿದ್ದಾರೆಂದು ಹೇಳಲಾಗುತ್ತಿದೆ.
ಇದೇ ಜುಲೈ 27-28 ರಂದು ಚೀನಾದ ಬೀಜಿಂಗ್ ನಲ್ಲಿ ಬ್ರಿಕ್ಸ್ (ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಎನ್ಎಸ್ಎ ಸಭೆಯಲ್ಲಿ ದೋವಲ್ ಪಾಲ್ಗೊಳ್ಳಲಿದ್ದು. ಸಭೆಯಲ್ಲಿ ಗಡಿಯಲ್ಲಿನ ಡೋಕ್ಕಾಮ್ ಬಿಕ್ಕಟ್ಟು ಕುರಿತಂತೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಸಿಕ್ಕಿಂ ಗಡಿಯಲ್ಲಿ, ಭೂತಾನ್-ಭಾರತ ಮತ್ತು ಚೀನಾ ಟ್ರೈಜಂಕ್ಷನ್ ಪ್ರದೇಶದಲ್ಲಿರುವ ಡೋಕ್ಲಾಮ್ ನಲ್ಲಿ ಚೀನಾ ಕೈಗೊಂಡ ವಿವಾದಾತ್ಮಕ ರಸ್ತೆ ನಿರ್ಮಾಣ ಕಾರ್ಯವನ್ನು ಕಳೆದ ಮಾರ್ಚ್ 16 ರಂದು ಭಾರತೀಯ ಸೇನೆ ನಿಲ್ಲಿಸಿತ್ತು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಸೇನಾ ಮುಖಾಮುಖೀ ಉಂಟಾಗಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.