ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಿತೀಶ್ ಅವರು ಬಿಹಾರ ರಾಜ್ಯದ ಜನತೆಗೆ ಹಾಗೂ ನಮಗೆ ದ್ರೋಹ ಮಾಡಿದ್ದಾರೆ. 2019ರ ಚುನಾವಣೆ ವೇಳೆ ತೇಜಸ್ವಿ ಪ್ರಬಲ ಎದುರಾಳಿಯಾಗಲಿದ್ದಾರೆಂಬುದನ್ನು ಅರಿತ ಬಿಜೆಪಿ, . ತೇಜಸ್ವಿ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದೆ. ಪ್ರಸ್ತುತದ ಎಲ್ಲಾ ಬೆಳವಣಿಗೆಗಳಿಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಿತೂರಿಯೇ ಕಾರಣ ಎಂದು ಲಾಲು ಆರೋಪಿಸಿದ್ದಾರೆ.