ಭಾರತೀಯ ಸೇನೆಯಲ್ಲಿ 52 ಸಾವಿರ ಸಿಬ್ಬಂದಿಗಳ ಕೊರತೆ!

ಭಾರತೀಯ ಸೇನೆಯಲ್ಲಿ ಪ್ರಸ್ತುತ 52 ಸಾವಿರ ಸೈನಿಕರ ಕೊರತೆ ಇದೆ ಎಂದು ಸ್ವತಃ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಭಾರತೀಯ ಸೇನೆಯಲ್ಲಿ ಪ್ರಸ್ತುತ 52 ಸಾವಿರ ಸೈನಿಕರ ಕೊರತೆ ಇದೆ ಎಂದು ಸ್ವತಃ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಕೊಂಡಿದೆ.

ಪ್ರಮುಖವಾಗಿ ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ಯಥೇಚ್ಛ ಸೈನಿಕರ ಕೊರತೆ ಕಂಡುಬಂದಿದ್ದು, ಕೆಳ ಹಂತದ ಸಿಬ್ಬಂದಿಗಳಿಂದ ಹಿರಿಯ ಅಧಿಕಾರಿಗಳ ವರೆಗೂ  ಹಲವು ಹುದ್ದೆಗಳು ಖಾಲಿ ಇವೆ. ಕಳೆದ ಎರಡು ವರ್ಷಗಳಲ್ಲಿ  ಸೇನೆಗೆ 245 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್ ಭಮ್ರೆ ತಿಳಿಸಿದ್ದಾರೆ. ಈ ಬಗ್ಗೆ ಸಂಸತ್ ಗೆ ಶುಕ್ರವಾರ ಲಿಖಿತ ಉತ್ತರ ನೀಡಿದ ಸಚಿವರು, ಸೇನೆಯಲ್ಲಿ  ಒಟ್ಟು 25,472 ಕೆಳಹಂತದ ಸಹಾಯಕ ಸಿಬ್ಬಂದಿಗಳ ಕೊರೆತೆ ಇದೆ.

ಈ ಪೈಕಿ ನೌಕಾಳದಲ್ಲಿ 13,373 ಸಿಬ್ಬಂದಿ ಕೊರತೆ ಕಂಡುಬಂದಿದ್ದು, ವಾಯುಪಡೆಯಲ್ಲಿ 13,785 ಸಿಬ್ಬಂದಿಗಳ ಕೊರತೆ ಕಂಡುಬಂದಿದೆ. ಅಂತೆಯೇ 2014ರಿಂದ 2016ರ ಅವಧಿಯಲ್ಲಿ ಒಟ್ಟು 245 ಮಹಿಳಾ ಸೈನಿಕರನ್ನು ನಿಯೋಜನೆ  ಮಾಡಿಕೊಳ್ಳಲಾಗಿದ್ದು, ನೌಕಾಳದಲ್ಲಿ 486 ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅಂತೆಯೇ 135 ಮಹಿಳಾ ಸೈನಿಕರನ್ನು ವಾಯುಪಡೆ ನಿಯೋಜಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com