ನದಿಗಳಿಂದ ಸಮುದ್ರ ಮಲಿನ; ಗಂಗಾನದಿಗೆ 2ನೇ ಸ್ಥಾನ!

ಸಮುದ್ರವನ್ನು ಮಲಿನಗೊಳಿಸುವ ನದಿಗಳಲ್ಲಿ ಭಾರತದ "ಪವಿತ್ರ" ಗಂಗಾ ನದಿ 2ನೇ ಸ್ಥಾನ ನೀಡಲಾಗಿದ್ದು, ಪ್ರತೀ ವರ್ಷ ಗಂಗೆಯಲ್ಲಿ ಸುಮಾರು 115,000 ಟನ್ ಪ್ಲಾಸ್ಟಿಕ್ ಮ್ತತು ಕಲ್ಮಶ ಸೇರುತ್ತಿದೆ ಎಂದು ತಜ್ಞರ ವರದಿಯೊಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಮುದ್ರವನ್ನು ಮಲಿನಗೊಳಿಸುವ ನದಿಗಳಲ್ಲಿ ಭಾರತದ "ಪವಿತ್ರ" ಗಂಗಾ ನದಿ 2ನೇ ಸ್ಥಾನ ನೀಡಲಾಗಿದ್ದು, ಪ್ರತೀ ವರ್ಷ ಗಂಗೆಯಲ್ಲಿ ಸುಮಾರು 115,000 ಟನ್ ಪ್ಲಾಸ್ಟಿಕ್ ಮ್ತತು ಕಲ್ಮಶ ಸೇರುತ್ತಿದೆ ಎಂದು ತಜ್ಞರ  ವರದಿಯೊಂದು ತಿಳಿಸಿದೆ.

ಒಂದೆಡೆ ಕೇಂದ್ರ ಸರ್ಕಾರ ‘ನಮಾಮಿ ಗಂಗೆ' ಹೆಸರಿನ ಯೋಜನೆ ಮೂಲಕ ಗಂಗಾ ನದಿಯ ಶುದ್ಧೀಕರಣಕ್ಕೆ ಮಾಡುತ್ತಿರುವುದಾಗಿ ಹೇಳುತ್ತಿದ್ದರೆ, ಮತ್ತೊಂದೆಡೆ ಸಮುದ್ರವನ್ನು ಮಲಿನಗೊಳಿಸುವ ನದಿಗಳಲ್ಲಿ ಗಂಗೆಗೆ ಜಗತ್ತಿನಲ್ಲೇ  2ನೇ ಸ್ಥಾನದ ಅಪಖ್ಯಾತಿ ಸಿಕ್ಕಿದೆ. ಗಂಗೆ ಕೇವಲ ತಾನು ಮಾತ್ರ ಕಲುಷಿತ ಗೊಳ್ಳಿತ್ತಿರುವುದಲ್ಲದೇ ಅದೇ ಕಲ್ಮಶದೊಂದಿಗೆ ಸಮುದ್ರ ಸೇರಿ ಅದನ್ನೂ ಕೂಡ ಕಲುಷಿತಗೊಳಿಸುತ್ತಿದೆ ಎಂದು ಸಮುದ್ರ ಸ್ವಚ್ಛತಾ ಅಭಿಯಾನ  ನಡೆಸುತ್ತಿರುವ ಡಚ್ ಮೂಲದ ಸಂಸ್ಥೆಯೊಂದು ಹೇಳಿದೆ.

‘ದಿ ಓಷನ್‌ ಕ್ಲೀನಪ್‌' (ಸಮುದ್ರ ಸ್ವಚ್ಛತೆ) ಎಂಬ ನೆದರ್ಲೆಂಡ್‌ ಪ್ರತಿಷ್ಠಾನವು ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ ನದಿಗಳು, ಸಮುದ್ರಕ್ಕೆ ಪ್ರತಿ ವರ್ಷ 1.15-2.41 ದಶಲಕ್ಷ ಟನ್‌ ಪ್ಲಾಸ್ಟಿಕ್‌ ತಂದು ಸೇರಿಸುತ್ತವೆ. ಇಷ್ಟೊಂದು ಪ್ಲಾಸ್ಟಿಕ್  ಅನ್ನು ಸಮುದ್ರದಿಂದ ತೆಗೆದು ಸ್ವಚ್ಛಗೊಳಿಸಲು 48 ಸಾವಿರದಿಂದ 1 ಲಕ್ಷ ಟ್ರಕ್‌ ಗಳು ಬೇಕಾಗಬಹುದು ಎಂದು ಹೇಳಿದೆ. ಅಂತೆಯೇ ಇಷ್ಟೊಂದು ಪ್ರಮಾಣದ ಕಲ್ಮಶ ಸಮುದ್ರ ಸೇರ್ಪಡೆಯಲ್ಲಿ ವಿಶ್ವದ ವಿವಿಧ ದೇಶಗಳ ಸುಮಾರು  20 ನದಿಗಳ ಪಾತ್ರವಿದ್ದು, ಈ ಪೈಕಿ ಏಷ್ಯಾದ ನದಿಗಳೇ ಹೆಚ್ಚಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಈ ಕಾರ್ಯದಲ್ಲಿ ಭಾರತದ "ಕೊಡುಗೆ" ಕೂಡ ಇದೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಪ್ರಕಾರ ಅತಿ ಹೆಚ್ಚು ಮಾಲಿನ್ಯ ಸೃಷ್ಟಿಸುವ ನದಿ ಎನ್ನಿಸಿಕೊಂಡಿರುವುದು ಚೀನಾದ ಯಾಂಗ್‌ಟ್ಸೆ ನದಿ. ಇದು 3,33,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೂರ್ವ ಚೀನಾ ಸಮುದ್ರಕ್ಕೆ ತಂದು ಸುರಿಯುತ್ತದೆ. ಬಳಿಕದ ಸ್ಥಾನ  ಭಾರತದ ಗಂಗಾ ನದಿಯದ್ದಾಗಿದ್ದು, ಗಂಗಾ ನದಿ ಪ್ರತೀ ವರ್ಷ ಬರೊಬ್ಬರಿ 1,15,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಂಗಾಳಕೊಲ್ಲಿಗೆ ತಂದು ಸೇರಿಸುತ್ತಿದೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com