ಇಡೀ ಜಬಲ್ಪುರ ಮಂಡಿಗೆ ಬೆಂಕಿ ಹಚ್ಚುತ್ತೇನೆ: ಪೊಲೀಸರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕ

ಮಧ್ಯಪ್ರದೇಶ ಜಬಲ್ಪುರದ ಇಡೀ ಮಂಡಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಬಿಡುತ್ತೇನೆಂದು ಕಾಂಗ್ರೆಸ್ ನಾಯಕ ಸಚಿನ್ ಯಾದವ್ ಅವರು ಮಧ್ಯಪ್ರದೇಶ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋವೊಂದು...
ಇಡೀ ಜಬಲ್ಪುರ ಮಂಡಿಗೆ ಬೆಂಕಿ ಹಚ್ಚುತ್ತೇನೆ: ಪೊಲೀಸರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕ
ಇಡೀ ಜಬಲ್ಪುರ ಮಂಡಿಗೆ ಬೆಂಕಿ ಹಚ್ಚುತ್ತೇನೆ: ಪೊಲೀಸರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕ
Updated on: 
ಭೋಪಾಲ್: ಮಧ್ಯಪ್ರದೇಶ ಜಬಲ್ಪುರದ ಇಡೀ ಮಂಡಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಬಿಡುತ್ತೇನೆಂದು ಕಾಂಗ್ರೆಸ್ ನಾಯಕ ಸಚಿನ್ ಯಾದವ್ ಅವರು ಮಧ್ಯಪ್ರದೇಶ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ. 
ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯಾಗಿಯೇ ಕಾಂಗ್ರೆಸ್ ಶಾಸತಿಯೊಬ್ಬರು ಬೆದರಿಕೆ ಹಾಕಿದ್ದ ವಿಡಿಯೋವೊಂದು ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಶಾಸಕಿ ಶಂಕುತಲಾ ಖಾತಿಕ್ ಅವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವಂತೆ ತಮ್ಮ ಕಾರ್ತಕರ್ತರಿಗೆ ಪ್ರಚೋದಿಸಿದ್ದ ವಿಡಿಯೋ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಶಾಸಕಿ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. 
ಖಾತಿಕ್ ಅವರ ಉದ್ರಿಕ್ತ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರೇ ಇದೀಗ ಸಚಿನ್ ಯಾದವ್ ಅವರ ವಿಡಿಯೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದಾರೆ. 
ವಿಡಿಯೋದಲ್ಲಿ ಸಚಿನ್ ಯಾದವ್ ಅವರು, ಜಬಲ್ಪುರದಲ್ಲಿನ ಮಂಡಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿಬಿಡುತ್ತೇನೆಂದು ಅತ್ಯಂತ ಕೋಪದಲ್ಲಿ ಪೊಲೀಸರಿಗೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com