ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಸ್ಪರ್ಧಿಸುತ್ತೇನೆ: ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್

ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೀರಾಕುಮಾರ್
ಸುದ್ದಿಗೋಷ್ಠಿಯಲ್ಲಿ ಮೀರಾಕುಮಾರ್
Updated on: 

ನವದೆಹಲಿ: ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಮಂಗಳವಾರ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮೀರಾ ಕುಮಾರ್ ಅವರು, ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ರಾಷ್ಟ್ರಪತಿ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ಗುಜರಾತ್ ನ ಸಬರಮತಿ ಆಶ್ರಮದಿಂದಲೇ  ನನ್ನ ಪ್ರಚಾರ ಕಾರ್ಯವನ್ನು ಆರಂಭಿಸುತ್ತೇನೆ ಎಂದು ಹೇಳಿದರು. ಬಹುತೇಕ ಸಂಸದರು ನಾನು ಸ್ಪೀಕರ್ ಆಗಿದ್ದ ಸಂದರ್ಭದ ಕರ್ತವ್ಯ ಪರಿಪಾಲನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸದನದ ಎಲ್ಲ ಸದಸ್ಯರಿಗೂ ನಾನು  ಪತ್ರ ಬರೆದಿದ್ದು, ಅವರ ಬೆಂಬಲ ಕೋರಿದ್ದೇನೆ ಎಂದು ಹೇಳಿದರು.

ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಜೆಡಿಯು ಬೆಂಬಲ ನೀಡಿರುವ ಕುರಿತು ಮಾತನಾಡಿದ ಮೀರಾ ಕುಮಾರ್ ಅವರು, ರಾಜಕೀಯದಲ್ಲಿ ಇವೆಲ್ಲಾ ಸಾಮಾನ್ಯ. ಇಂದು ನಮ್ಮನ್ನು ಬೆಂಬಲಿಸಿದರುವು  ನಾಳೆ ಮತ್ತೊಬ್ಬರನ್ನು ಬೆಂಬಲಿಸುತ್ತಾರೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ನಾನು ಸೂಕ್ತ ನಿರ್ಧಾರ  ಕೈಗೊಳ್ಳುತ್ತೇನೆ. ಸಾಮಾನ್ಯಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ವಿಪಕ್ಷಗಳ ಒಗ್ಗಟ್ಟು ನಿಂತಿದೆ ಎಂದು  ಹೇಳಿದರು. ಇನ್ನು ದೇಶದಲ್ಲಿ  ನಡೆಯುತ್ತಿರುವ ದಲಿತರ ಮೇಲಿನ ದಾಳಿ ಕುರಿತಂತೆ ಮಾತನಾಡಿದ ಅವರು, ದಲಿತರ ಮೇಲಿನ ದಾಳಿ ಹೀನ ಕೃತ್ಯ ಮತ್ತು ಅವಮಾನಕರ ಎಂದು ಬಣ್ಣಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com