ಕೇರಳ ಸಿಎಂ ತಲೆಗೆ ರೂ.1 ಕೋಟಿ ಇನಾಮು ಹೇಳಿಕೆ: ಆರ್'ಎಸ್ಎಸ್ ಖಂಡನೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ.1 ಕೋಟಿ ಇನಾಮು ಘೋಷಿಸಿದ್ದ ಕುಂದನ್ ಚಂದ್ರವತ್ ಅವರ ಹೇಳಿಕೆದೆ ಆರ್'ಎಸ್ಎಸ್ ಗುರುವಾತ ತೀವ್ರ ಖಂಡನೆ ವ್ಯಕ್ತಪಡಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ.1 ಕೋಟಿ ಇನಾಮು ಘೋಷಿಸಿದ್ದ ಕುಂದನ್ ಚಂದ್ರವತ್ ಅವರ ಹೇಳಿಕೆದೆ ಆರ್'ಎಸ್ಎಸ್ ಗುರುವಾತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 
ಹೇಳಿಕೆ ಸಂಬಂಧ ಸಾಮಾಜಿಕ ಜಾಲತಾಣದ ಅಧಿಕೃತ ಟ್ಟಿಟರ್ ನಲ್ಲಿ  ಆರ್'ಎಸ್ಎಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಹಿಂಸೆಗೆ ಪ್ರಚೋಜನೆ ನೀಡುವ ಅಭಿಪ್ರಾಯಗಳು ಹಾಗೂ ಹೇಳಿಕೆಗಳನ್ನು ಆರ್'ಎಸ್ಎಸ್ ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಇಂತಹ ಹೇಳಿಕೆಗಳನ್ನು ಆರ್'ಎಸ್ಎಸ್ ಖಂಡಿಸುತ್ತದೆ ಎಂದು ಹೇಳಿದೆ. 
ಉಜ್ಜಯಿನಿಯ ಶಹೀದ್ ಪಾರ್ಕ್'ನಲ್ಲಿ ಅರ್'ಎಸ್ಎಸ್ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶದ ಸ್ಥಳೀಯ ಆರ್'ಎಸ್ಎಸ್ ನಾಯಕ ಕುಂದನ್ ಚಂದ್ರಾವತ್ ಅವರು, ಹಿಂದೂಪರ ಸಂಘಟನೆಗಳ ಪ್ರತಿ ರೋಧದ ನಡುವೆಯೂ ಸಿಪಿಎಂ ಮಂಗಳೂರಿನಲ್ಲಿ ಆಯೋಜಿಸಿದ್ದ ಸೌಹಾರ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದ ಹಿರಿಯ ಎಡಪಂಥೀಯ ನಾಯಕ ಮತ್ತು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.  ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. ಹೇಳಿಕೆಯ ಬೆನ್ನಲ್ಲೇ ಕೇರಳದ ಆರ್'ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿಯನ್ನು ಕೂಡ ನಡೆಸಲಾಗಿದೆ. 
ಹೇಳಿಕೆಗೆ ಸಮರ್ಥನೆ
ಕೇರಳ ಮುಖ್ಯಮಂತ್ರಿ ತಲೆಗೆ ರೂ.1 ಕೋಟಿ ಇನಾಮು ನೀಡುವುದಾಗಿ ಘೋಷಣೆ ಮಾಡಿದ್ದ ಹೇಳಿಕೆಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕುಂದನ್ ಚಂದ್ರಾವತ್ ಅವರು, ನನ್ನ ಸ್ಫೋಟಕ ಹೇಳಿಕೆ ಭಗತ್ ಸಿಂಗ್ ಅವರ ಹೇಳಿಕೆಯಂತಿತ್ತು. ಬ್ರಿಟೀಷರ ಮೇಲೆ ಬಾಂಬ್ ದಾಳಿ ನಡೆಸಿ ಎಂದು ಭಗತ್ ಸಿಂಗ್ ಅವರು ಹೇಳಿದ್ದರು. ಹಾಗೆಯೇ ನಾನೂ ಕೂಡ ಹೇಳಿದ್ದೆ. ಹಿಂದೂಗಳು ನಿದ್ರಿಸುತ್ತಿಲ್ಲ ಎಂಬ ಸಂದೇಶವನ್ನು ಸಾರುವುದಷ್ಟೇ ನನ್ನ ಹೇಳಿಕೆಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com