ಬೇರೆ ಪಕ್ಷಗಳಿಂದ ಹಣ ಪಡೆದು ತಮ್ಮ ಪಕ್ಷಕ್ಕೆ ವೋಟು ಮಾಡುವಂತೆ ಮತದಾರರಿಗೆ ಅಖಿಲೇಶ್ ಯಾದವ್ ಸಲಹೆ

ಹಣ ಪಡೆದು ವೋಟು ಮಾಡುವಂತೆ ಮತದಾರರಿಗೆ ಹೇಳಿದ ನಾಯಕರ ಪಟ್ಟಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ..
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on: 

ಬಡೋಯ್: ಹಣ ಪಡೆದು ವೋಟು ಮಾಡುವಂತೆ ಮತದಾರರಿಗೆ ಹೇಳಿದ ನಾಯಕರ ಪಟ್ಟಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರ್ಪಡೆಯಾಗಿದ್ದಾರೆ.

ಮತದಾರರಿಗೆ ವೋಟು ಚಲಾಯಿಸಲು ಹಣ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಮತದಾರರು ಬೇರೆ ಪಕ್ಷದವರು, ಸಂಘಟನೆಗಳು ನೀಡುವ ಹಣ ಪಡೆಯಿರಿ ಆದರೆ ಬೈಸಿಕಲ್ ಗುರುತಿಗೆ ಮತ ಚಲಾಯಿಸುವಂತೆ ಅವರು ಮತದಾರರಿಗೆ ಸಲಹೆ ನೀಡಿದ್ದಾರೆ. ಸಮಾಜವಾದಿ ಪಕ್ಷದ ಚಿಹ್ನೆ ಬೈಸಿಕಲ್ ಆಗಿರುವುದರಿಂದ ಅದಕ್ಕೆ ಮತ ನೀಡುವಂತೆ ಅವರು ಹೇಳಿದ್ದಾರೆ.

ಈ ಹಿಂದೆ ಇದೇ ಮನೋಹರ್ ಪರಿಕ್ಕರ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಗೋವಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪರಿಕ್ಕರ್ ಯಾರಾದರೂ 2ಸಾವಿರ ರೂ ಹಣ ನೀಡಿದರೇ ತೆಗೆದುಕೊಳ್ಳಿ, ರ್ಯಾಲಿ ನಡೆಸಿದರೇ ಅಲ್ಲಿ ಬಾಗವಹಿಸಿ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಕಮಲದ ಗುರುತಿಗೆ ಮಾತ್ರ ಮತ ಚಲಾಯಿಸಿ ಎಂದು ಪರಿಕ್ಕರ್ ಹೇಳಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಜಾಗರೂಕತೆಯಿಂದ ಹೇಳಿಕೆ ನೀಡುವಂತೆ ಪರಿಕ್ಕರ್ ಅವರಿಗೆ ಸೂಚಿಸಿತ್ತು. ಇನ್ನೂ ಬೇರೆ ಪಕ್ಷಗಳಿಂದ ಹಣ ಪಡೆದು ತಮ್ಮ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವಂತೆ ಹೇಳಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಚುನಾವಣಾ ಆಯೋಗ ಎಫ್ ಐ ಆರ್ ದಾಖಲಿಸಿಲು ಸೂಚಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com