ವಿಧಾನಸಭಾ ಚುನಾವಣೆ 2017: ಮಣಿಪುರದಲ್ಲಿ ಶೇ.69, ಉ.ಪ್ರದೇಶದಲ್ಲಿ ಶೇ.39ರಷ್ಟು ಮತದಾನ

ಬಹುನಿರೀಕ್ಷಿತ ಪಂಚರಾಜ್ಯಗಳ ಪೈಕಿ ಮಣಿಪುರದಲ್ಲಿ ಮೊದಲ ಹಂತದ ಹಾಗೂ ಉತ್ತರಪ್ರದೇಶದಲ್ಲಿ 6ನೇ ಹಂತದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಈ ವರೆಗೂ ಮಣಿಪುರದಲ್ಲಿ ಶೇ.69 ಹಾಗೂ ಉತ್ತರಪ್ರದೇಶದಲ್ಲಿ ಶೇ.39ರಷ್ಟು ಮತದಾನವಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಬಹುನಿರೀಕ್ಷಿತ ಪಂಚರಾಜ್ಯಗಳ ಪೈಕಿ ಮಣಿಪುರದಲ್ಲಿ ಮೊದಲ ಹಂತದ ಹಾಗೂ ಉತ್ತರಪ್ರದೇಶದಲ್ಲಿ 6ನೇ ಹಂತದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಈ ವರೆಗೂ ಮಣಿಪುರದಲ್ಲಿ ಶೇ.69 ಹಾಗೂ ಉತ್ತರಪ್ರದೇಶದಲ್ಲಿ ಶೇ.39ರಷ್ಟು ಮತದಾನವಾಗಿದೆ. 

ಬಿಗಿ ಭದ್ರತೆಯೊಂದಿಗೆ ಮತದಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಮಣಿಪುರದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಉತ್ತರಪ್ರದೇಶದಲ್ಲಿ 5 ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಇಂದು 6ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇಂದಿನ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡರೆ, ಉಭಯ ರಾಜ್ಯಗಳಲ್ಲಿ ಇನ್ನು ಒಂದು ಹಂತದ ಮತದಾನ ನಡೆಯಬೇಕಿದೆ. ಇದರ ಬಳಿಕ ಉಭಯ ರಾಜ್ಯಗಳ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 

ಮಣಿಪುರದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 19,02,562 ಮತದಾರಿದ್ದು, ಇದರಲ್ಲಿ 9,28,562 ಪುರುಷರು ಹಾಗೂ 9,73,989 ಮಹಿಳಾ ಮತದಾರರಿದ್ದಾರೆ. 168 ಅಭ್ಯರ್ಥಿಗಳ ಭವಿಶ್ಯ ಇಂದು ನಿರ್ಧಾರವಾಗಲಿದೆ. ಮಣಿಪುರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದೆ. 

ಉತ್ತರಪ್ರದೇಶದಲ್ಲಿ 6ನೇ ಹಂತದ ಮತದಾನ ಆರಂಭವಾಗಿದ್ದು, ಅಖಾಡದಲ್ಲಿರುವ 638 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ. 49 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆಗಳು ಆರಂಭಗೊಂಡಿದೆ. ಮತದಾನ ಹಿನ್ನಲೆಯಲ್ಲಿ ಒಟ್ಟು 17,926 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಈ ವರೆಗೂ ಶೇ.23 ರಷ್ಟು ಮತದಾನವಾಗಿರುವುದಾಗಿ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com