ಸಂಬಳ ಸಹಿತ 26 ವಾರಗಳ ಮಾತೃತ್ವ ರಜೆಗೆ ಲೋಕಸಭೆಯಲ್ಲಿ ಅನುಮೋದನೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದೆ. ಇದುವರೆಗೂ ಸಂಭಾವನೆ ಸಹಿತ 12 ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದೆ. ಇದುವರೆಗೂ ಸಂಭಾವನೆ ಸಹಿತ 12 ವಾರಗಳಷ್ಟೇ ಇದ್ದ ಮಾತೃತ್ವ ರಜೆಯನ್ನು ಕೇಂದ್ರ ಸರ್ಕಾರ 26 ವಾರಗಳಿಗೆ ವಿಸ್ತರಿಸಿದೆ.

ಕೆನಡಾ, ನಾರ್ವೆ ನಂತರ ಅತಿ ಹೆಚ್ಚು ಮಾತೃತ್ವ ರಜೆ ನೀಡಿದ ದೇಶ ಭಾರತ ಎನ್ನುವ ಹೆಗ್ಗಳಿಕೆ ಈ ಮೂಲಕ ಸಿಕ್ಕಿದೆ. ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮದ ಮರುದಿನವೇ ಪಾರ್ಲಿಮೆಂಟಿನಲ್ಲಿ "ಮಾತೃತ್ವ ಅನುಕೂಲ ಮಸೂದೆ'ಗೆ ತಿದ್ದುಪಡಿ ತರಲಾಗಿದೆ. ಈ ಮಸೂದೆಯಿಂದ ಸಂಘಟಿತ ವಲಯದ 18 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ.

ಮಹಿಳಾ ಉದ್ಯೋಗಿ ಗರ್ಭಿಣಿಯಾದರೆ ಕೇವಲ 3 ತಿಂಗಳಷ್ಟೇ ಸಂಭಾವನೆ ಸಹಿತ ರಜೆ ಸಿಗುತ್ತಿತ್ತು. ಈಗ ಇದು ಆರೂವರೆ ತಿಂಗಳಿಗೆ ವಿಸ್ತರಣೆ ಆದಂತಾಗಿದೆ. ತಿಂಗಳ ಹಿಂದಷ್ಟೇ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆಗೆ ಒಮ್ಮತದ ಒಪ್ಪಿಗೆ ಸಿಕ್ಕಿತ್ತು. ಗುರುವಾರ ಲೋಕಸಭೆಯಲ್ಲಿ ಅನುಮೋದನೆ ಪಡಕೊಂಡಿದೆ. ಆರಂಭದ ಎರಡು ಮಕ್ಕಳಿಗೆ ಸೌಲಭ್ಯ ಸಿಗಲಿದೆ. ಮೂರನೇ ಮಗುವಿನ ಅವಧಿಯಲ್ಲಿ ಕೇವಲ 12 ವಾರ ಮಾತ್ರ ಸಂಭಾವನೆ ಸಹಿತ ರಜೆ ಇರಲಿದೆ.

ಗರ್ಭಿಣಿ ಮಹಿಳೆಯರಿಗೆ ಎಷ್ಟು ಪ್ರಮಾಣದಲ್ಲಿ ಸೌಲಭ್ಯ ನೀಡಲು ಸಾಧ್ಯವೋ ಅಷ್ಟನ್ನು ನೀಡಲು ಸರ್ಕಾರ ಸಿದ್ದವಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. ಈ ವೇಳೆ ಕೆಲ ಸಂಸದರು ಪಿತೃತ್ವ ರಜೆ ನೀಡುವಂತೆ ಒತ್ತಾಯಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com