

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇಂದು ಮತ್ತೆ ಭೂ ಕುಸಿತ ಉಂಟಾಗಿರುವ ಪರಿಣಾಮ ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ಸುಮಾರು 300 ಕಿಮೀ ಬಂದ್ ಆಗಿದೆ.
ಭಾರತದ ಎಲ್ಲಾ ನಗರಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕಳೆದ ನಾಲ್ಕು ದಿನಗಳಿಂದ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು, ನಿನ್ನೆಯಷ್ಟೇ ಏಕ ಮುಖ ಸಂಚಾರಕ್ಕೆ ತೆರವುಗೊಳಿಸಲಾಗಿತ್ತು.
ಮತ್ತೆ ಇಂದು ಭೂ ಕುಸಿತ ಉಂಟಾಗಿರುವುದರಿಂದ ರಸ್ತೆಯನ್ನು ಕ್ಲೋಸ್ ಮಾಡಲಾಗಿದೆ ಎಂದು ಸಂಚಾರ ಇಲಾಖೆ ತಿಳಿಸಿದೆ. ಪಂಥಿಯಾಲ್ ರಸ್ತೆ ಭೂ ಕುಸಿತದಿಂದ ಹಾನಿಗೊಳಗಾಗಿದೆ. ಹೀಗಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ರದ್ಧುಗೊಳಿಸಲಾಗಿದೆ.