

ಅಲಹಾಬಾದ್: ಭಾರತೀಯ ವಾಯುಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಒಂದು ಅಲಹಾಬಾದ್ ಸಮೀಪ ತುರ್ತು ಭೂಸ್ಪರ್ಶ ಮಾಡುವ ವೇಳೆ ಮಗುಚಿ ಬಿದ್ದಿದ್ದು, ಅದೃಷ್ಟ ವಶಾತ್ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್ ನ ಬಾಮ್‌ರೋಲಿ ಎಂಬ ಪ್ರದೇಶಲ್ಲಿ ತರಬೇತಿ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ಚೇತಕ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ತುರ್ತಾಗಿ ಭೂಸ್ಪರ್ಶಮಾಡ ಬೇಕಾಯಿತು. ಈ ವೇಳೆ ಹೆಲಿಕಾಪ್ಟರ್ ಮಗುಚಿ ಬಿದ್ದಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರೂ ಪೈಲಟ್ ಗಳು ಆಶ್ಚರ್ಯಕರ ರೀತಿಯಲ್ಲಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಪೈಲಟ್ ಗಳು ಅದನ್ನು ತುರ್ತಾಗಿ ಕೆಳಗಿಳಿಸಲು ಯತ್ನಿಸಿದರು. ಆಗ ಹೆಲಿಕಾಪ್ಟರ್ ಬುಡ ಮೇಲಾಗಿ ನೆಲಕ್ಕುರುಳಿತು.
ಇನ್ನು ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಹಿರಿಯ ಅಧಿಕಾರಿಗಳಿಗೆ ತನಿಖಾ ಜವಾಬ್ದಾರಿ ನೀಡಲಾಗಿದೆ.