ಮಧ್ಯಪ್ರದೇಶ: ಹೋಳಿಯಾಡಿ ಠಾಣೆ ಎದುರೇ ಕುಡಿದು ಕುಪ್ಪಳಿಸಿದ 15 ಪೊಲೀಸರ ಅಮಾನತು

ಹೋಳಿಯಾಡಿ ತಮ್ಮ ಪೊಲೀಸ್ ಠಾಣೆಯ ಎದುರೇ ಬಿಯರ್ ಕುಡಿದು ಕುಪ್ಪಳಿಸಿದ್ದ ಮಧ್ಯಪ್ರದೇಶದ 15 ಪೊಲೀಸರನ್ನು....
ಬಿಯರ್ ಕುಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ಬಿಯರ್ ಕುಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ಗ್ವಾಲಿಯರ್‌: ಹೋಳಿಯಾಡಿ ತಮ್ಮ ಪೊಲೀಸ್ ಠಾಣೆಯ ಎದುರೇ ಬಿಯರ್ ಕುಡಿದು ಕುಪ್ಪಳಿಸಿದ್ದ ಮಧ್ಯಪ್ರದೇಶದ 15 ಪೊಲೀಸರನ್ನು ಗುರುವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಳೆದ ಮಂಗಳವಾರ ಗ್ವಾಲಿಯರ್‌ನ ಪುರಾನಿ ಛಾವನಿ ಠಾಣೆಯ ಪೊಲೀಸರು ಹೋಳಿಯಾಡಿ ಠಾಣೆ ಎದುರೇ ಬಿಯರ್‌ ಕುಡಿದು, ಡ್ಯಾನ್ಸ್ ಮಾಡಿದ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಠಾಣೆಯ ಇಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ 13 ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆಶಿಶ್ ಅವರು ಹೇಳಿದ್ದಾರೆ.
ಸಮವಸ್ತ್ರದಲ್ಲೇ ಹೋಳಿಯಾಡಿರುವ ಪೊಲೀಸ್‌ ಸಿಬ್ಬಂದಿ ಠಾಣೆಯ ಎದುರು ಬಿಯರ್‌ ಕುಡಿದಿದ್ದರು. ಇನ್ನು ಕೆಲವು ಪೊಲೀಸ್‌ ಸಿಬ್ಬಂದಿ ಕೆಲವರ ಬಾಯಿಗೆ ಬಿಯರ್‌ ಸುರಿದಿದ್ದಾರೆ. ಕುಡಿಯಲು ನಿರಾಕರಿಸಿದವರಿಗೂ ಬಲವಂತವಾಗಿ ಬಿಯರ್‌ ಕುಡಿಸಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿದೆ.
ಪೊಲೀಸರು ಹೀಗೆ ಹಗಲಿನಲ್ಲಿ ಠಾಣೆಯ ಎದುರಲ್ಲೇ ಬಿಯರ್‌ ಕುಡಿದು ಮೋಜು ಮಾಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com