ಎನ್ ಕೌಂಟರ್ ಕುರಿತಂತೆ ಮಾಹಿತಿ ನೀಡಿರುವ ದಂತೆವಾಡ ಪೊಲೀಸ್ ವರಿಷ್ಠಾಧಿಕಾರಿ ಕಮರ್ ಲೋಚನ್ ಕಶ್ಯಪ್ ಅವರು, ಬರೇನ್ ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ನಕ್ಸಲರು ಬೀಡು ಬಿಟ್ಟಿರುವ ಕುರಿತಂತೆ ಶನಿವಾರ ಬೆಳಿಗ್ಗೆ ನಮಗೆ ಮಾಹಿತಿ ತಿಳಿದುಬಂದಿತ್ತು. ಹೀಗಾಗಿ ಕಾರ್ಯಾಚರಣೆಗೆ ನಡೆಸಲು ನಾವು ಯೋಜನೆ ರೂಪಿಸಿದ್ದೆವು. ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ನಕ್ಸಲರು ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಕೂಡಲೇ ಸೇನಾ ದಾಳಿಗೆ ದಿಟ್ಟ ಉತ್ತರವನ್ನು ನೀಡಿದು. ಈ ವೇಳೆ 6 ನಕ್ಸಲರನ್ನು ಸೇನಾ ಪಡೆ ಹತ್ಯೆ ಮಾಡಿದೆ. ಎನ್ ಕೌಂಟರ್ ಸ್ಥಳದಲ್ಲಿ ನಕ್ಸಲರ ಸಮವಸ್ತ್ರಗಳು, ಎಕೆ-47 ರೈಫಲ್ಸ್, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಯೋಧರೂ ಕೂಡ ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.