ನವದೆಹಲಿ: ರೈಲಿನಲ್ಲಿ ಊಟ, ತಿಂಡಿಯ ಬೆಲೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಮಂಗಳವಾರ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಂದು ವೇಳೆ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಿಧಿಸಿದರೆ ದೂರು ನೀಡುವಂತೆ ಸಚಿವಾಲಯ ತಿಳಿಸಿದೆ.
ಭಾರತೀಯ ರೈಲ್ವೆಯ ಕೇಟರಿಂಗ ದರ ಪಟ್ಟಿಯನ್ನು ಗಮನಿಸಿ, ಒಂದು ವೇಳೆ ಇದಕ್ಕೂ ಹೆಚ್ಚು ದರ ವಿಧಿಸಿದರೆ @RailMinIndiaಗೆ ದೂರು ನೀಡಿ, ನಿಮಗಾಗಿ ನಾವು 24 ಗಂಟೆ ಕೆಲಸ ಮಾಡುತ್ತೇವೆ ಎಂದು ರೈಲ್ವೆ ಸಚಿವಾಲಯ ಇಂದು ಟ್ವೀಟ್ ಮಾಡಿದೆ.
ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿರುವ ದರ ಪಟ್ಟಿ (ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ)