ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಶಾಲೆ ಬಂದ್!

ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಪ್ರೀಮಿಯರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ನ ಅಲ್ ಫ್ರಡ್ ಪ್ರೌಢಶಾಲೆ ಮುಚ್ಚಲ್ಪಟ್ಟಿದೆ.
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ
Updated on: 
ರಾಜ್ ಕೋಟ್: ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಪ್ರೀಮಿಯರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ನ ಅಲ್ ಫ್ರಡ್ ಪ್ರೌಢಶಾಲೆ ಮುಚ್ಚಲ್ಪಟ್ಟಿದೆ. 
ಅಲ್ ಫ್ರಡ್ ನ ಪ್ರೌಢಶಾಲೆ ಮುಚ್ಚುವುದಕ್ಕೆ ಗುಜರಾತ್ ರಾಜ್ಯ ಸರ್ಕಾರವೇ ಆದೇಶ ನೀಡಿದ್ದು, ಶಾಲೆಯಲ್ಲಿ ನೋಂದಣಿ ಮಾಡಿಕೊಂಡಿದ್ದ 150 ವಿದ್ಯಾರ್ಥಿಗಳಿಗೆ ಟಿ.ಸಿ ನೀಡಲಾಗಿದೆ. ಮಹಾತ್ಮಾ ಗಾಂಧಿ ಓದಿದ್ದ ಅಲ್ ಫ್ರಡ್ ಪ್ರೌಢಶಾಲೆಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾತ್ಮಾ ಗಾಂಧಿ ಅವರ ಕುರಿತ ಮ್ಯೂಸಿಯಂ ನ್ನು ಪ್ರಾರಂಭಿಸಬೇಕಾಗಿದ್ದು, ಇದಕ್ಕಾಗಿ 2016 ರಲ್ಲಿ ಗುಜರಾತ್ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗುಜರಾತ್ ಸರ್ಕಾರದ ಅಧಿಸೂಚನೆಯಂತೆ ಮಹಾತ್ಮಾ ಗಾಂಧಿ ಓದಿದ್ದ ಪ್ರೌಢ ಶಾಲೆಯನ್ನು ಮುಚ್ಚಿಸಲಾಗಿದೆ. ಶಾಲೆ ನಡೆಸುವುದಕ್ಕೆ ಹಾಗೂ ಮ್ಯೂಸಿಯಂ ಮಾಡುವುದಕ್ಕೆ ಅಲ್ ಫ್ರಡ್ ಶಾಲೆಯಿರುವ ಪ್ರದೇಶ ವಿಶಾಲವಾಗಿರುವುದಕ್ಕೆ ಮಹಾತ್ಮಾ ಗಾಂಧಿ ಕುರಿತ ಮ್ಯೂಸಿಯಂ ಮಾಡುವುದಕ್ಕೆ ಅಲ್ ಫ್ರಡ್ ಪ್ರೌಢ ಶಾಲೆಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. 
ಅಲ್ ಫ್ರಡ್ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಈಗ ಕರಣ್ ಸಿಂಗ್ ಜಿ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿದೆ.  ಬ್ರಿಟೀಷರು ಪ್ರಾರಂಭಿಸಿದ್ದ ಅಲ್ ಫ್ರಡ್ ಶಾಲೆ ಈ ಪ್ರದೇಶದಲ್ಲಿ ಪ್ರಾರಂಭವಾದ ಮೊದಲ ಶಾಲೆಯಾಗಿದೆ. 
1853 ರ ಅಕ್ಟೋಬರ್ 17 ರಂದು ಪ್ರಾರಂಭವಾದ ಈ ಶಾಲೆಯನ್ನು ಮೊದಲು ರಾಜ್ ಕೋಟ್ ಇಂಗ್ಲೀಷ್ ಶಾಲೆ ಎಂದು ಹೇಳಲಾಗುತ್ತಿತ್ತು. 1907 ರಲ್ಲಿ ಈ ಶಾಲೆಗೆ ಅಲ್ ಫ್ರಡ್ ಶಾಲೆ ಎಂಬ ಹೆಸರು ಬಂದಿತ್ತು. ಮಹಾತ್ಮಾ ಗಾಂಧಿ ಈ ಶಾಲೆಯಲ್ಲಿ ಓದಿದ್ದರಿಂದ ಇದನ್ನು 1947 ರ ನಂತರ ಮೋಹನ್ ದಾಸ್ ಗಾಂಧಿ ಪ್ರೌಢಶಾಲೆ ಎಂದು ಮರು ನಾಮಕರಣ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com