ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ವರದಿಗಳ ಪ್ರಕಾರ ವಿದೇಶಿ ನಿರ್ಮಿತ ರಿಮೋಟ್ ನಿಯಂತ್ರಿತ ಬಾಂಬ್ ನ್ನು ಲೋಕಚೋ ಟ್ರಾನ್ಸ್ ಏಷ್ಯನ್ ಹೈವೇಯಲ್ಲಿ ಸ್ಫೋಟ ನಡೆಸಲಾಗಿದೆ. 165 ಟೆರಿಟೋರಿಯಲ್ ಆರ್ಮಿಯ ಸಿಬ್ಬಂದಿಗಳು ಹೈವೇಯಲ್ಲಿ ತೆರಳುತ್ತಿರಬೇಕಾದರೆ ಬಾಂಬ್ ಸ್ಫೋಟಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.