ಮೋದಿ ಸರ್ಕಾರದಿಂದ ಏರ್ ಇಂಡಿಯಾಗೆ 451.75 ಕೋಟಿ ರೂ ಬಾಕಿ!

ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿಗಳ ವಿದೇಶ ಪ್ರವಾಸಕ್ಕೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಳಕೆಯಾಗುವ ಏರ್ ಇಂಡಿಯಾ ವಿಮಾನಗಳ ಸಂಸ್ಥೆಗೆ ಕೇಂದ್ರ ಸರ್ಕಾರ ಒಟ್ಟು 451.75 ಕೋಟಿ ರೂಪಾಯಿ...
ಏರ್ ಇಂಡಿಯಾ
ಏರ್ ಇಂಡಿಯಾ
Updated on: 
ನವದೆಹಲಿ: ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿಗಳ ವಿದೇಶ ಪ್ರವಾಸಕ್ಕೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಳಕೆಯಾಗುವ ಏರ್ ಇಂಡಿಯಾ ವಿಮಾನಗಳ ಸಂಸ್ಥೆಗೆ ಕೇಂದ್ರ ಸರ್ಕಾರ ಒಟ್ಟು 451.75 ಕೋಟಿ ರೂಪಾಯಿ ಬಾಕಿ ನೀಡಬೇಕಿದೆ ಎಂಬುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ. 
ನಿವೃತ್ತ ಏರ್ ಕೊಮೊಡೊರ್ ಲೋಕೇಶ್ ಬಾತ್ರ ಅವರು ಸಲ್ಲಿಸಿದ್ದ ಆರ್ ಟಿಐ ಗೆ ಬಂದಿರುವ ಪ್ರತಿಕ್ರಿಯೆಯ ಪ್ರಕಾರ, ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿಗಳು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸೇರಿದಂತೆ ಸಂಬಂಧಪಟ್ಟವರಿಗೆ 2014-17 ರ ನಡುವೆ ಒಟ್ಟು 31 ಪತ್ರಗಳನ್ನು ಬರೆದಿದ್ದು ಬಾಕಿ ಇರುವ ಮೊತ್ತವನ್ನು ಶೀಘ್ರವೇ ಪಾವತಿಸಬೇಕೆಂದು  ಮನವಿ ಮಾಡಿದ್ದಾರೆ.     
ನಿರ್ವಹಣಾ ವೆಚ್ಚವನ್ನು ಶೀಘ್ರವೇ ಪಾವತಿಸಿ, ವಿವಿಐಪಿ ವಿಮಾನಯಾನ ಸೇವೆ ಹಾಗೂ ಏರ್ ಇಂಡಿಯಾ ಕೈಗೊಳ್ಳುವ ಇನ್ನಿತರ ವಿಶೇಷ ಕಾರ್ಯಾಚರಣೆಗಳ ಬಜೆಟ್ ನಲ್ಲಿ ಕೆಲವು ಬದಲಾವಣೆಯಾಗಬೇಕೆಂದು ಪತ್ರದಲ್ಲಿ ಆಗ್ರಹಿಸಿಸಲಾಗಿದೆ ಎಂದು ಆರ್ ಟಿಐ ಮೂಲಕ ತಿಳಿದುಬಂದಿದೆ. 
ಏರ್ ಇಂಡಿಯಾ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳ ಬಳಕೆ ಹಾಗೂ ವಿಶೇಷ ಸಂದರ್ಭಗಳಲ್ಲಿನ ಕಾರ್ಯಾಚರಣೆಗಾಗಿಯೇ 3 ಬೋಯಿಂಗ್ 747-400 ಏರ್ ಕ್ರಾಫ್ಟ್ ಗಳನ್ನು ಹೊಂದಿದೆ. ಆರ್ ಟಿಐ ನ ಮಾಹಿತಿಯ ಪ್ರಕಾರ, ಮಾ.31 2017 ರ ವರೆಗೆ ಏರ್ ಇಂಡಿಯಾಗೆ ಕೇಂದ್ರ ಸರ್ಕಾರ ಒಟ್ಟು 451.75 ಕೋಟಿ ರೂಪಾಯಿ ಮೊತ್ತ ಪಾವತಿಸಬೇಕಿದ್ದು ಈ ಪೈಕಿ ಕೆಲವು ಬಿಲ್ ಗಳು 2006 ರಿಂದಲೂ ಬಾಕಿ ಇವೆ ಎಂಬ ಮಾಹಿತಿ ಬಹಿರಂಗವಾಗಿದೆ. 
2016 ರ ನವೆಂಬರ್ 9-2017 ರ ಫೆಬ್ರವರಿ 10 ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ, ಆಫ್ರಿಕಾ ರಾಷ್ಟ್ರಗಳು, ಉಜ್ಬೇಕಿಸ್ತಾನ, ವಿಯೆಟ್ನಾಂ, ಥಾಯ್ ಲ್ಯಾಂಡ್ ಸೇರಿದಂತೆ ಒಟ್ಟು 6 ವಿದೇಶ ಪ್ರವಾಸದ ಬಾಕಿ ಮೊತ್ತವೇ 47.37 ಕೋಟಿಯಷ್ಟಿದೆ. ಇನ್ನು 2008 ರ ಜೂನ್ ನಿಂದ ಮಾರ್ಚ್ 18, 2017 ರ ವರೆಗಿನ ಉಪರಾಷ್ಟ್ರಪತಿಗಳ 22 ವಿದೇಶ ಪ್ರವಾಸದ ಬಾಕಿ ಮೊತ್ತ 206.19 ಕೋಟಿಯಷ್ಟಿದ್ದು. ನಿರ್ವಹಣಾ ವೆಚ್ಚ 145.63 ಕೋಟಿಯಷ್ಟಿದ್ದರೆ ವಿದೇಶಾಂಗ ಇಲಾಖೆ 23.57 ಕೋಟಿಯಷ್ಟು ಬಾಕಿ ಹಣ ಪಾವತಿ ಮಾಡಬೇಕಿದೆ ಎಂದು ಆರ್ ಟಿ ಮೂಲಕ ಬಹಿರಂಗವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com