ಮದುಮಗನನ್ನು ಅಪಹರಿಸಿದ ಯುವತಿ
ದೇಶ
ಗನ್ ತೋರಿಸಿ ಮದುಮಗನನ್ನು ಅಪಹರಿಸಿದ ಮಾಜಿ ಪ್ರಿಯತಮೆ!
ಗಂಡು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪ್ರೇಯಸಿಯನ್ನು ಹೀರೋ ಬಂದು ಬಿಡಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಉತ್ತರಪ್ರದೇಶದಲ್ಲೊಂದು...
ಬಂದಾ(ಉತ್ತರಪ್ರದೇಶ): ಗಂಡು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪ್ರೇಯಸಿಯನ್ನು ಹೀರೋ ಬಂದು ಬಿಡಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಉತ್ತರಪ್ರದೇಶದಲ್ಲೊಂದು ಘಟನೆ ನಡೆದಿದೆ.
ತನ್ನ ಪ್ರಿಯತಮ ಇನ್ನೊಬ್ಬಳಿಗೆ ತಾಳಿಕಟ್ಟುವುದನ್ನು ಸಹಿಸಲಾಗದ ಯುವತಿಯೊಬ್ಬಳು ಮದುವೆ ನಡೆಯುತ್ತಿರುವಾಗಲೇ ಆತನನ್ನು ಗನ್ ತೋರಿಸಿ ಅಪಹರಿಸಿರುವ ಘಟನೆ ಉತ್ತರಪ್ರದೇಶದ ಹಮೀರ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಅಶೋಕ್ ಕುಮಾರ್ ಎಂಬಾತ ವಧುವಿನ ಜತೆ ಹಾರ ಬದಲಾಯಿಸಿ ತಾಳಿ ಕಟ್ಟಲು ಸಿದ್ಧನಾಗುತ್ತಿದ್ದ ಈ ವೇಳೆ ಎಸ್ ಯುವಿ ಕಾರಿನಲ್ಲಿ ಮೂವರ ಜತೆ ಮದುವೆ ಮಂಟಪಕ್ಕೆ ಸಿನಿಮೀಯ ಶೈಲಿಯಲ್ಲಿ ಬಂದ ಮಾಜಿ ಪ್ರಿಯತಮೆ, ಗನ್ ತೋರಿಸಿ ಮದುವೆ ಗಂಡನ್ನು ಅಪಹರಿಸಿದ್ದಾಳೆ. ಇದನ್ನು ಅತಿಥಿಗಳು ಮೂಲಪ್ರೇಕ್ಷಕರಾಗಿ ನೋಡಬೇಕಾಯಿತು.
ಕಳೆದ 8 ವರ್ಷಗಳಿಂದ ಯುವಕನ ಪರಿಚಯವಿದೆ. ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಆದರೆ, ನಾನು ಈ ರೀತಿಯ ನಿರ್ಧಾರ ತೆಗೆದುಕೊಂಡಿರುತ್ತೇನೆಂಬುದು ಆತನ ಊಹಿಸಿರಲಿಲ್ಲ. ಮದುವೆಯಾಗಲು ಆತನಿಗೇ ಇಷ್ಟವಿರಲಿಲ್ಲ ಎಂದು ವರನನ್ನು ಅಪಹರಿಸಿದ ಯುವತಿ ವರ್ಷಾ ಸಾಹು ಹೇಳಿಕೊಂಡಿದ್ದಾಳೆ.
ಮಹಿಳೆ ಬಂದಾ ಜಿಲ್ಲೆಯ ನಿವಾಸಿಯಾಗಿದ್ದು, ಖಾಸಗಿ ಕ್ಲಿನಿಕ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ಅಶೋಕ್ ಯಾದವ್ ಹಾಗೂ ಯುವತಿ ಪ್ರೀತಿ ಮಾಡುತ್ತಿದ್ದರು. ಪ್ರಸ್ತುತ ಯುವತಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ಇಬ್ಬರೂ ಪ್ರೇಮಿಗಳು ಎಂದು ಹೇಳಿದ್ದಾಳೆ. ಅಲ್ಲದೆ, ಮದುವೆಯಾಗಲು ಹುಡುಗನಿಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾಳೆಂದು ಪೊಲೀಸ್ ಅಧಿಕಾರಿ ಹಮಿರ್ಪುರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ