ವಂಚನೆ ಕೇಸು: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು

ಜವಳಿ ಸಂಸ್ಥೆಯ ಮಾಲೀಕ ದಾಖಲಿಸಿದ್ದ ವಂಚನೆ ಕೇಸಿಗೆ ಸಂಬಂಧಪಟ್ಟಂತೆ ಥಾಣೆಯ...
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ
Updated on: 
ಥಾಣೆ: ಜವಳಿ ಸಂಸ್ಥೆಯ ಮಾಲೀಕ ದಾಖಲಿಸಿದ್ದ ವಂಚನೆ ಕೇಸಿಗೆ ಸಂಬಂಧಪಟ್ಟಂತೆ ಥಾಣೆಯ ಜಿಲ್ಲಾ ನ್ಯಾಯಾಲಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು ನೀಡಿದೆ.
ನ್ಯಾಯಾಲಯ ಈ ಹಿಂದೆ ಆರೋಪಿಗಳಿಗೆ ಬಂಧನವಾಗದಂತೆ ಮಧ್ಯಂತರ ರಕ್ಷಣೆ ನೀಡಿತ್ತು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಗೀತ ಖಲಿಪೆ ಆದೇಶ ನೀಡಿ ಬಂಧನಕ್ಕೊಳಪಡಿಸಿದ್ದರೆ ಆರೋಪಿಗಳನ್ನು 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.
ಬಲೊಟಿಯಾ ಎಕ್ಸ್ಪೋರ್ಟ್ ನ ಮಾಲಿಕ ರವಿ ಭಲೊಟಿಯಾ, ಕಂಗೊನ್ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ದೂರು ದಾಖಲಿಸಿದ್ದರು. ರಾಜ್ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ನಿರ್ದೇಶಕರಾಗಿರುವ ಬೆಸ್ಟ್ ಡೀಲ್ ಟಿವಿಗೆ ಬೆಡ್ ಶೀಟ್ ಗಳನ್ನು ಪೂರೈಸಿದ್ದು, ಅವರು ಅದನ್ನು ಮಾರಾಟ ಮಾಡಿದ್ದಾರೆ. ಆದರೆ ತಮಗೆ ಬರಬೇಕಾದ 24 ಲಕ್ಷ ರೂಪಾಯಿ ನೀಡಲಿಲ್ಲ ಎಂದು  ದೂರಿನಲ್ಲಿ ಆರೋಪಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com