ಇದೇ ವೇಳೆ ಪುಸ್ತಕದಲ್ಲಿ ಮೋದಿಯವರು ತಾವೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ. 'ಅಮೆರಿಕದಲ್ಲಿನ ಅಧ್ಯಕ್ಷರು ರೇಡಿಯೋ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮಾರ್ಟಿನ್ ಲೂಥರ್ ಕಿಂಗ್ ಅವರು 'ಐ ಹ್ಯಾವ್ ಎ ಡ್ರೀಮ್' ಭಾಷಣ ರೇಡಿಯೋದಿಂದಲೇ ಖ್ಯಾತಿ ಹೊಂದಿತು. ಇತರ ಮಾಧ್ಯಮಗಳಿಗಿಂತ ಹೆಚ್ಚು ಬದಲಾವಣೆ ಸೃಷ್ಟಿಸುವ ಶಕ್ತಿ ರೇಡಿಯೋಗಿದೆ ಎಂದು ಮೋದಿಯವರು ಹೇಳಿದ್ದಾರೆ.