ಮೇ 8 ರಿಂದ 13ರವರೆಗೆ ರಿಪಬ್ಲಿಕ್ ಚಾನೆಲ್‌ನಲ್ಲಿ ಸುನಂದಾ ಪುಷ್ಕರ್ ಸಾವಿನ ಕುರಿತಾದ ವರದಿ ಬಿತ್ತರಿಸಲಾಗಿತ್ತು. ಈ ವೇಳೆ ತಮ್ಮ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ತರೂರ್, ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ನ್ಯೂಸ್ ಚಾನೆಲ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ, ತಮ್ಮ ಘನತೆಗೆ ಧಕ್ಕೆ ತಂದ ಕಾರಣ 2 ಕೋಟಿ ರುಪಾಯಿ ನಷ್ಟ ಪರಿಹಾರ ತುಂಬಬೇಕೆಂದು ಶಶಿ ತರೂರ್ ಒತ್ತಾಯಿಸಿದ್ದಾರೆ.