ದೇಶ

ಜುಲೈ 6ರಂದು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್'ಗೆ ಚಾಲನೆ: ಶಿವಪಾಲ್ ಯಾದವ್

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ಸೈಡ್ ಲೈನ್ ಆಗಿರುವ ಶಿವಪಾಲ್ ಯಾದವ್ ಅವರು ಜುಲೈ 6ರಂದು 'ಸಮಾಜವಾದಿ....

ಜುಲೈ 6ರಂದು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್'ಗೆ ಚಾಲನೆ: ಶಿವಪಾಲ್ ಯಾದವ್
ಶಿವಪಾಲ್ ಯಾದವ್
Published On :
ಲಖನೌ: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ಸೈಡ್ ಲೈನ್ ಆಗಿರುವ ಶಿವಪಾಲ್ ಯಾದವ್ ಅವರು ಜುಲೈ 6ರಂದು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಎಂಬ ಹೊಸ ಸಂಘಟನೆಗೆ ಜಾಲನೆ ನೀಡುವುದಾಗಿ ಬುಧವಾರ ಹೇಳಿದ್ದಾರೆ.
ಇದೇ ವೇಳೆ 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಒಂದು ಸಂಘಟನೆ ಅಷ್ಟೆ, ರಾಜಕೀಯ ಪಕ್ಷ ಅಲ್ಲ ಎಂದು ಶಿವಪಾಲ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷವನ್ನು ಸರಿಯಾದ ದಾರಿಗೆ ತರುವುದಕ್ಕಾಗಿ ನಾವು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಅನ್ನು ರಚಿಸಿರುವುದಾಗಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಈ ಫ್ರಂಟ್ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ತಾವು ಇದರ ಸಂಚಾಲಕರಾಗಿರುವುದಾಗಿ ಶಿವಪಾಲ್ ಯಾದವ್ ಅವರು ಹೇಳಿದ್ದಾರೆ. ಅಲ್ಲದೆ ಸಮಾಜವಾದಿ ಪಕ್ಷದಲ್ಲಿ ಕಡೆಗಣಿಸಲ್ಪಟ್ಟಿರುವ ನಾಯಕರು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ನೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.